ಗಾಝಾ ಸಂಸತ್‌, ಇತರ ಸರ್ಕಾರಿ ಕಚೇರಿಗಳು ಇಸ್ರೇಲ್ ಸೇನೆಯ ವಶಕ್ಕೆ

Prasthutha|

ಜೆರುಸಲೇಂ: ಗಾಝಾ ನಗರದಲ್ಲಿ ಹಮಾಸ್‌ ಸಂಸತ್‌ ಭವನ ಹಾಗೂ ಇತರ ಸರ್ಕಾರಿ ಕಚೇರಿಗಳನ್ನು ತಾನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

- Advertisement -

ಹಮಾಸ್‌ನ ಸಂಸತ್‌, ಸರ್ಕಾರಿ ಕಚೇರಿಗಳು, ಪೊಲೀಸ್‌ ಪ್ರಧಾನ ಕಚೇರಿ, ಶಸ್ತ್ರಾಸ್ತ್ರಗಳ ತಯಾರಿ ಮತ್ತು ಅಭಿವೃದ್ಧಿ ಮಾಡುತ್ತಿದ್ದ ಎಂಜಿನಿಯರಿಂಗ್‌ ಘಟಕ ಇವೆಲ್ಲವನ್ನು ವಶಕಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಇಸ್ರೇಲಿ ಸೇನೆ ನಿಯೋಜನೆಗೊಂಡಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದು, ತುಲ್ಕರೇಮ್‌ ನಗರದಲ್ಲಿ ಇಸ್ರೇಲ್‌ ಸೇನೆಯ ಕಾರ್ಯಾಚರಣೆಯಲ್ಲಿ ಏಳು ಮಂದಿ ಪ್ಯಾಲೆಸ್ತೀನಿಯರು ಮೃತರಾಗಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ.



Join Whatsapp