ಗಾಝಾ: 42 ಸಾವಿರ ದಾಟಿದ ಸಾವಿನ ಸಂಖ್ಯೆ

Prasthutha|

ಬೈರೂತ್: ಇಸ್ರೇಲ್ ಆಕ್ರಮಣದಿಂದಾಗಿ ಗಾಝಾದಲ್ಲಿ ಜನಾಂಗೀಯ ನರಮೇಧಕ್ಕೆ ಬಲಿಯಾದವರ ಸಂಖ್ಯೆ 42 ಸಾವಿರವನ್ನು ದಾಟಿದೆ.

- Advertisement -


ಈ ಮಧ್ಯೆ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್, ಇನ್ನೊಂದು ಸೇನಾ ತುಕಡಿಯನ್ನು ನಿಯೋಜಿಸಿದೆ.


ಬೈರೂತ್ ನಲ್ಲಿರುವ ಹಿಜ್ಬುಲ್ಲಾ ನೆಲೆಗಳೆಂದು ಹೇಳಲಾದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ವಾಯುದಾಳಿಗಳನ್ನು ನಡೆಸಿದೆ.

- Advertisement -


ಸಿರಿಯ ರಾಜಧಾನಿ ಡಮಾಸ್ಕಸ್ ನಲ್ಲಿರುವ ಇರಾನ್ ರಾಯಬಾರಿ ಕಟೇರಿ ಸಮೀಪವೇ ಇಸ್ರೇಲ್ ವಾಯುದಾಳಿಗಳನ್ನು ನಡೆಸಿದೆ. ಇಸ್ರೇಲ್ ದಾಳಿಯಿಂದಾಗಿ ಈವರೆಗೆ ಲೆಬನಾನ್ ನಲ್ಲಿ 1200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 8 ಸಾವಿರ ಮಂದಿ ಗಾಯಗೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.



Join Whatsapp