ಗಾಝಾ: ಇಸ್ರೇಲ್ ದಾಳಿಯಲ್ಲಿ ನವಜಾತ ಶಿಶು ಸೇರಿ 5 ಮಂದಿ ಮೃತ

Prasthutha|

ಗಾಝಾ: ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ಅಲ್-ಮವಾಸಿ ಶಿಬಿರದ ಮೇಲೆ ರವಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ನವಜಾತ ಶಿಶುವಿನ ಸೇರಿದಂತೆ 5ಕ್ಕಿಂತಲೂ ಹೆಚ್ಚು ಜನರುಸಾವನ್ನಪ್ಪಿ 7 ಮಂದಿ ಗಾಯಗೊಂಡಿದ್ದಾರೆಂದು ಗಾಝಾ ನಾಗರಿಕ ರಕ್ಷಣಾ ಏಜೆನ್ಸಿ ತಿಳಿಸಿದೆ.

- Advertisement -

ಸುರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಅಲ್-ಮವಾಸಿ ಶಿಬಿರ ಪ್ರದೇಶಗಳಲ್ಲಿ ಸ್ಥಳಾಂತರಿತ ಪ್ಯಾಲೆಸ್ತೀನೀಯರು ಆಶ್ರಯ ಪಡೆದಿದ್ದರು. ಅಲ್-ಮವಾಸಿಯ ಕರಾವಳಿ ಪ್ರದೇಶ ಸೇರಿದಂತೆ ಖಾನ್ ಯೂನಿಸ್ ನಗರದ ಸುತ್ತಮುತ್ತ ಕಾರ್ಯಾಚರಣೆ ಬಿರುಸುಗೊಳಿಸಿದ ಇಸ್ರೇಲ್ ಪಡೆ, ರವಿವಾರ ಅಲ್-ಮವಾಸಿಯಲ್ಲಿ ಸ್ಥಳಾಂತರಿತ ಜನರು ನೆಲೆಸಿದ್ದ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಮಾಧ್ಯಮಗಳು ವರದಿ ಮಾಡಿವೆ.



Join Whatsapp