ಗಾಝಾ: ಝವಾಯ್ ದಾ ಪಟ್ಟಣದಲ್ಲಿ ಇಸ್ರೇಲ್ ನಡೆಸಿದ ಭೀಕರ ಕ್ಷಿಪಣಿದಾಳಿಯಲ್ಲಿ ಕನಿಷ್ಠ 17 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ.
ಶನಿವಾರ ನಸುಕಿನಲ್ಲಿ ಭೀಕರ ದಾಳಿ ನಡೆದಿದ್ದು, ಮೃತರಲ್ಲಿ ಎಂಟು ಮಕ್ಕಳು ಹಾಗೂ ನಾಲ್ವರು ಮಹಿಳೆಯರೆಂದೂ, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಒಂದೇ ಕುಟುಂಬಕ್ಕೆ ಸೇರಿದವರೆಂದೂ ಗಾಝಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ರಾಕೆಟ್ ದಾಳಿ ನಡೆಸುತ್ತಿರುವ ಹಮಾಸ್ ಹೋರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆಯೆಂದು ಇಸ್ರೇಲ್‌ನ ಸೇನಾ ವಕ್ತಾರರಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ
ಹೇಳಿದ್ದಾರೆ.