ಪ್ರಧಾನಿ ಮೋದಿಯೊಂದಿಗಿನ ನಿಕಟ ಸಂಬಂಧದ ಬಗ್ಗೆ ಟೀಕೆಗಳನ್ನು ತಳ್ಳಿಹಾಕಿದ ಗೌತಮ್ ಅದಾನಿ

Prasthutha|

ನವದೆಹಲಿ: ತನ್ನ ಉದ್ಯಮದ ಏಳಿಗೆಯಲ್ಲಿ  ಯಾವುದೇ ಒಬ್ಬ ರಾಜಕೀಯ ವ್ಯಕ್ತಿಯ ಪಾತ್ರವಿಲ್ಲ ಎಂದು ಕೈಗಾರಿಕೋದ್ಯಮಿ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಹೇಳಿದ್ದಾರೆ.

- Advertisement -

ಖಾಸಗಿ ವಾಹಿನಿಯ ಜೊತೆ ಮಾತನಾಡಿದ ಅವರು, ‘ರಾಜೀವ್ ಗಾಂಧಿ ಕಾಲದಲ್ಲಿ ಅದಾನಿ ಗ್ರೂಪ್ ಪ್ರಾರಂಭವಾಗಿತ್ತು. ನಾನು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ರಾಜ್ಯಕ್ಕೆ ಸೇರಿದವರು. ಹೀಗಾಗಿ ಅವರಿಂದ ನನ್ನ ಉದ್ಯಮಕ್ಕೆ ಲಾಭವಾಗುತ್ತಿದೆ ಎಂದು ವೃಥಾ ಆರೋಪ ಮಾಡಲಾಗುತ್ತಿದೆ. ಇಂಥ ಆರೋಪಗಳು ನನ್ನ ಮೇಲೆ ಮಾಡುತ್ತಿರುವುದು ದುರದೃಷ್ಟಕರ  ಎಂದು ಬೇಸರ ವ್ಯಕ್ತಪಡಿಸಿದರು.

ಇದೆಲ್ಲಾ ರಾಜೀವ್ ಗಾಂಧಿ ಅವರ ಕಾಲದಲ್ಲಿ ಆರಂಭವಾಯ್ತು ಎನ್ನುವುದನ್ನು ತಿಳಿದರೆ ಹಲವರಿಗೆ ಆಶ್ಚರ್ಯವಾಗುತ್ತದೆ. ಅವರು ಆಮದು–ರಫ್ತು ನೀತಿ ಸಡಿಲಗೊಳಿಸಿದಾಗ ಉದ್ಯಮ ಆರಂಭವಾಯ್ತು. ಆದರೆ ರಾಜೀವ್ ಗಾಂಧಿಗಾಗಿ ನನ್ನ ಉದ್ಯಮ ಪಯಣ ಆರಂಭವಾಗಿದ್ದಲ್ಲ ಎಂದು ಅದಾನಿ ಹೇಳಿದರು.

- Advertisement -

ನಮ್ಮ ಸಮೂಹ ಉದ್ಯಮಗಳ ಯಶಸ್ಸನ್ನು ಕಡಿಮೆ ಅವಧಿಯಲ್ಲಿ ವೀಕ್ಷಿಸಿ, ನಮ್ಮ ಮೇಲೆ ಪಕ್ಷಪಾತದ ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ಉದ್ಯಮ ಯಶಸ್ಸು ಯಾವುದೇ ವ್ಯಕ್ತಿಯಿಂದಾಗಿಲ್ಲ. ಮೂರು ದಶಕಗಳಲ್ಲಿ ಹಲವು ನಾಯಕರು ಮತ್ತ ಸರ್ಕಾರಗಳು ಮಾಡಿದ ನೀತಿ, ಸಾಂಸ್ಥಿಕ ಸುಧಾರಣೆಗಳಿಂದ ಎನ್ನುವುದು ವಾಸ್ತವ ಎಂದಿದ್ದಾರೆ.



Join Whatsapp