ಜೈಲಿನಲ್ಲಿ ನನ್ನನ್ನು ಕೊಲ್ಲಲು ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ

Prasthutha|

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರು ಜೈಲಿನಲ್ಲಿ ನನ್ನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -


ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸುರೇಶ್ ಗೌಡ, ‘ಕೊಲೆ ಅಲ್ಲ, ತಾಕತ್ ಇದ್ದರೆ ನನ್ನ ಒಂದು ಕೂದಲು ಕಿತ್ತುಕೋ ನೋಡೋಣ. ನಿನ್ನ ಒಂದೊಂದು ಆಟವೂ ನನಗೆ ಗೊತ್ತಿದೆ. ನನ್ನ ಕೊಲೆ ಮಾಡಿಸೋದಿಕ್ಕೆ ನೀನು ಸಜ್ಜಾಗಿದ್ದೀಯಾ. ನನ್ನನ್ನು ಕೊಲ್ಲಲು ಜೈಲಲ್ಲಿ ಇರೋರಿಗೆ ಸುಪಾರಿ ಕೊಡ್ತೀಯಾ…’ ಎಂದು ಆಕ್ರೋಶ ಹೊರಹಾಕಿದರು.


ನಿನ್ನ ನಾಟಕ ಎಲ್ಲ ಬಂದ್ ಮಾಡು, ನಮ್ಮ ತಾಕತ್ ಏನು ಅನ್ನೋದನ್ನ ನಮ್ಮ ಕಾರ್ಯಕರ್ತರು ತೋರಿಸ್ತಾರೆ. ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಅನ್ನೋದನ್ನ ಪ್ರತಿ ಊರಿನಲ್ಲೂ ತೋರಿಸಿದ್ದೀವಿ ಎಂದು ಹೇಳಿದ್ದಾರೆ.



Join Whatsapp