ಗೋರಕ್ಷಕರ ವಿರುದ್ಧದ ಪ್ರಕರಣ ಹಿಂಪಡೆದು, ಶಸ್ತ್ರಾಸ್ತ್ರಕ್ಕೆ ಅನುಮತಿ ಕೊಡಿ: ಮಹಾಪಂಚಾಯತ್ ನಲ್ಲಿ ಗೋರಕ್ಷಕ ಒಕ್ಕೂಟ ಆಗ್ರಹ

Prasthutha|

ನವದೆಹಲಿ: ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಮತ್ತು ಶಸ್ತ್ರಾಸ್ತ್ರ ಹೊಂದಲು ಅನುಮತಿ ನೀಡಬೇಕೆಂದು ಗೋರಕ್ಷಕ ಸಂಘಟನೆಗಳ ಒಕ್ಕೂಟ ಮಹಾಪಂಚಾಯತ್ ನಲ್ಲಿ ಹರ್ಯಾಣ ಸರ್ಕಾರವನ್ನು ಆಗ್ರಹಿಸಿದೆ.
ತಿಂಗಳೊಳಗಾಗಿ ಅಕ್ರಮ ಗೋಸಾಗಾಟವನ್ನು ನಿಲ್ಲಿಸಬೇಕೆಂಬ ಅಂತಿಮ ಗಡುವನ್ನು ಮಹಾಪಂಚಾಯತ್ ನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

- Advertisement -

ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಗೋರಕ್ಷಕರಿಗೆ ಹರ್ಯಾಣದ ನುಹ್ ಜಿಲ್ಲೆಯ ಗ್ರಾಮಗಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಫಿರೋಝ್ ಪುರ್ ಝಿರ್ಕಾ ಕ್ಷೇತ್ರದ ಶಾಸಕ ಮಮ್ಮನ್ ಖಾನ್ ಅವರು ಎಚ್ಚರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಅಕ್ರಮ ಗೋಸಾಗಾಟ ಮತ್ತು ಹತ್ಯೆ ಆರೋಪದಡಿಯಲ್ಲಿ ಗೋರಕ್ಷಕರು ಹಲವು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಘಟನೆಯ ಬಳಿಕ ಶಾಸಕ ಮಮ್ಮನ್ ಖಾನ್ ಈ ಹೇಳಿಕೆ ನೀಡಿದ್ದರು.

- Advertisement -

ಏಪ್ರಿಲ್ 23 ರಂದು ನಡೆದ ಘಟನೆಯಲ್ಲಿ ಶೇಖ್ ಪುರ್ ಎಂಬಲ್ಲಿ ಹುಸೇನ್ ಎಂಬಾತನನ್ನು ಸುಮಾರು 25 ಮಂದಿಯ ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡ ಅಪಹರಿಸಿತ್ತು. ಈ ಮಧ್ಯೆ ಹುಸೈನ್ ವಿರುದ್ಧ ಹರ್ಯಾಣ ಗೋವಂಶ್ ಸಂರಕ್ಷನ್ ಮತ್ತು ಗೋಸಂವರ್ಧನ್ ಕಾಯ್ದೆ 2015 ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಘಟನೆ ಕುರಿತ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಪರಿಚಿತ ಬಜರಂಗದಳ ತಂಡ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಘಟನೆಯನ್ನು ಹೋಲುವ ಇನ್ನೊಂದು ಘಟನೆ ಸಮೀಪದ ಬಸಾಯಿ ಮಿಯೋ ಮತ್ತು ರಾವ್ಲಿ ಗ್ರಾಮದಲ್ಲೂ ನಡೆದಿತ್ತು.

ಭಾನುವಾರ ನಡೆದ ಮಹಾಪಂಚಾಯತ್ ಜಿಲ್ಲಾಡಳಿತ ಅನುಮತಿ ನೀಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ ಹಲವು ಬಂದೂಕು, ತಲವಾರು ಮತ್ತು ಕೊಡಲಿಗಳನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಬಿಜೆಪಿ ಸ್ಥಳೀಯ ಶಾಸಕ ಸಂಜಯ್ ಸಿಂಗ್ ಭಾಗವಹಿಸಿದ್ದು, ಮಹಾಪಂಚಾಯತ್ ನ ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತ್ರಿ ಅವರ ಮುಂದಿಡುವುದಾಗಿ ತಿಳಿಸಿದ್ದಾರೆ.

Join Whatsapp