ನಿಮ್ಮ ಗ್ಯಾಸ್ ಸಬ್ಸಿಡಿಗೆ ಬಿತ್ತು ಕತ್ತರಿ | ಎಲ್ ಪಿಜಿ ಸಬ್ಸಿಡಿ ರದ್ದುಗೊಳಿಸಿದ ಮೋದಿ ಸರಕಾರ

Prasthutha|


ನವದೆಹಲಿ : ತಾವು ಅಧಿಕಾರಕ್ಕೆ ಬಂದರೆ, ಜನರಿಗೆ ‘ಅಚ್ಚೇ ದಿನ್ (ಒಳ್ಳೆಯ ದಿನಗಳು)’ ಬರುತ್ತದೆ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ, ಜನತೆಯ ಜೇಬಿಗೇ ಕನ್ನ ಹಾಕುತ್ತಿರುವುದು ಇನ್ನೂ ಮುಂದುವರಿದಿದೆ. ಇದೀಗ, ನಿಮ್ಮ ಅಡುಗೆ ಅನಿಲದಿಂದ ದೊಡ್ಡ ಮೊತ್ತದ ಹಣ ಉಳಿಸಲು ಮೋದಿ ಸರಕಾರ ನಿರ್ಧರಿಸಿದೆ. ಇಲ್ಲಿ ವರೆಗೆ ನಿಮ್ಮ ಮನೆಗಳಲ್ಲಿ ಬಳಕೆಯಾಗುತ್ತಿದ್ದ ಎಲ್ ಪಿಜಿ ಸಿಲಿಂಡರ್ ಗೆ ಸಿಗುತ್ತಿದ್ದ, ಸಬ್ಸಿಡಿ ಹಣ ಇನ್ನು ಮುಂದೆ ನೀಡದಿರಲು ಸರಕಾರ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

- Advertisement -

ಮನೆಗಳಲ್ಲಿ ಬಳಸುವ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ಸಂಪೂರ್ಣ ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದ್ದು, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ನಿಯಮಿತ ಏರಿಕೆಯಾದರೂ, ಎಲ್ ಪಿಜಿ ದರವು ಮಾರುಕಟ್ಟೆ ದರಕ್ಕೆ ಸಮಾನಾಗಿದೆ. ಹೀಗಾಗಿ ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರಕಾರ ಘೋಷಿಸಿದೆ.

ಸೆ.1ರಂದು ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲದ ದರವು ಸಿಲಿಂಡರ್ ಗೆ 594 ರೂ. ಆಗಿದೆ. ಹೀಗಾಗಿ ಖಾತೆಗೆ ನೇರ ವರ್ಗಾವಣೆ ರೂಪದಲ್ಲಿ ಇನ್ನು ಮುಂದೆ ಫಲಾನುಭವಿಗಳಿಗೆ ಸಬ್ಸಿಡಿ ದೊರೆಯುವುದಿಲ್ಲ.

Join Whatsapp