ಬೆಳ್ಳುಳ್ಳಿ: ಇದರ ಆರೋಗ್ಯ ಪ್ರಯೋಜನ ತಿಳಿದುಕೊಳ್ಳಿ

Prasthutha|

- Advertisement -

ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದೆಂದು ಎಲ್ಲರಿಗೂ ಗೊತ್ತು. ಆದರೆ ಇದು ರುಚಿಯನ್ನು ದ್ವಿಗುಣಗೊಳಿಸುವುದು ಮಾತ್ರವಲ್ಲದೆ, ದೇಹಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಆಯುರ್ವೇದ ತಜ್ಞರ ಪ್ರಕಾರ, ಬೆಳ್ಳುಳ್ಳಿ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಇದು ದೇಹವನ್ನು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.

- Advertisement -

ಇದು ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಅಲ್ಲದೆ, ವೈರಲ್ ಸೋಂಕಿನಿಂದ ದೇಹವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಪ್ರತಿದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯಾಘಾತದ ಸಮಸ್ಯೆ ದೂರಾಗುತ್ತದೆ. ಇದು ರಕ್ತವನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರ ಗುಣಲಕ್ಷಣಗಳು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸುಲಭಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಶೀತ, ಕೆಮ್ಮು ಸಮಸ್ಯೆಗೆ ಇದು ಪರಿಹಾರ. ಆದರೆ ಇದನ್ನು ಬಳಸುವ ವಿಧಾನ ಮಾತ್ರ ಬೇರೆ. ಕೆಮ್ಮು, ಶೀತದ ಬಾಧೆ ಇದ್ದರೆ ಬೆಳ್ಳುಳ್ಳಿ ಸುಟ್ಟು ಜಜ್ಜಿ ರಸ ತೆಗೆದು ಜೇನಿನ ಜತೆ ಸೇರಿಸಿ ಬೆಳಗ್ಗೆ ಹಾಗೂ ಮಲಗುವ ಮುನ್ನ ಸೇವಿಸಬೇಕು. ಇದರಿಂದ ಅತಿ ಶೀಘ್ರದಲ್ಲಿ ಗುಣಮುಖರಾಗುತ್ತಾರೆ.

ದಿನಾ ಬೆಳಗ್ಗೆ ಎದ್ದು 2 ಎಸಳು ಬೆಳ್ಳುಳ್ಳಿಯನ್ನು ಹುರಿದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು. ಹೀಗೆ ಬೆಳ್ಳುಳ್ಳಿ ಸೇವಿಸುವುದರಿಂದ ಮೈ ಬೊಜ್ಜು ಕಡಿಮೆಯಾಗುತ್ತದೆ ಮಾತ್ರವಲ್ಲ ಹಲವು ಆರೋಗ್ಯ ಸಮಸ್ಯೆಗಳನ್ನೂ ದೂರವಿಡುತ್ತದೆ.

ಹುರಿದ ಬೆಳ್ಳುಳ್ಳಿಯೊಂದಿಗೆ ಜೇನು ಸೇರಿಸಿ ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಜೀರ್ಣಕ್ರಿಯೆಗೂ ಇದು ಸಹಕಾರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು. ಗ್ಯಾಸ್ಟ್ರಿಕ್‌, ಮಲಬದ್ಧತೆಯನ್ನೂ ನಿವಾರಿಸುತ್ತದೆ.



Join Whatsapp