ಗಂಜೀಮಠ ಗ್ರಾ.ಪಂ. ‘ಕೈ’ವಶ: ಬಹುಮತ ಇದ್ದರೂ ಮುಖಭಂಗ ಅನುಭವಿಸಿದ ಬಿಜೆಪಿ

Prasthutha|

►ಇನಾಯತ್ ಅಲಿ ರಣತಂತ್ರಕ್ಕೆ ಬಿಜೆಪಿ ಭದ್ರಕೋಟೆ ಛಿದ್ರ

- Advertisement -

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಂಜೀಮಠ ಗ್ರಾಮ ಪಂಚಾಯತ್ ಕಾಂಗ್ರೆಸ್ ಪಾಲಾಗಿದೆ. ಪಂಚಾಯತ್ ನಲ್ಲಿ ಬಿಜೆಪಿ ಬಹುಮತ ಹೊಂದಿದ್ದರು ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ.

ಗಂಜೀಮಠ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಲತಿ ಹಾಗೂ ಉಪಾಧ್ಯಕ್ಷೆಯಾಗಿ ಸಾರಮ್ಮ ಆಯ್ಕೆಯಾಗಿದ್ದಾರೆ.

- Advertisement -

ಒಟ್ಟು 30 ಸದಸ್ಯ ಬಲದ ಗಂಜೀಮಠ ಗ್ರಾಮ ಪಂಚಾಯತ್ ನಲ್ಲಿ 18 ಮಂದಿ ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ 7, ಜೆಡಿಎಸ್ ಬೆಂಬಲಿತ 2 ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದರು. ಬಿಜೆಪಿ ಬೆಂಬಲಿತರು ಬಹುಮತ ಹೊಂದಿದ್ದರೂ ನಾಟಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಲತಿ ಅವರು 14 ಮತಗಳನ್ನು ಪಡೆದರೆ,  ಬಿಜೆಪಿ ಅಭ್ಯರ್ಥಿ ರೇಖಾ ಅವರಿಗೆ 13 ಮತಗಳು ಬಿದ್ದಿವೆ. ಮೂರು ಮತಗಳು ನೋಟಾಗೆ ಬಿದ್ದಿದೆ.

ಉಪಾಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾರಮ್ಮ ಅವರಿಗೆ 14 ಮತಗಳು ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಲೋಲಾಕ್ಷಿ ಅವರಿಗೆ 13 ಮತಗಳು ಹಾಗೂ ಮೂರು ಮತಗಳು ನೋಟಾಗೆ ಬಿದ್ದಿದೆ.

ಬಿಜೆಪಿ ಬೆಂಬಲಿತ ಐವರು ಸದಸ್ಯರು ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದಾರೆ.  ಇಬ್ಬರು ಜೆಡಿಎಸ್ ಬೆಂಬಲಿತ ಸದಸ್ಯರ ಮತಗಳು ಕೂಡ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿದೆ.

ಕಾಂಗ್ರೆಸ್ ಬೆಂಬಲಿತರ ಅಚ್ಚರಿಯ ಗೆಲುವಿನ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯಲ್ ಅಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇನಾಯಲ್ ಅಲಿ ಅವರ ರಣತಂತ್ರದಿಂದ ಬಿಜೆಪಿ ಈ ರೀತಿ ಮುಖಭಂಗ ಅನುಭವಿಸಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಹಲವು ಬಿಜೆಪಿ ಬೆಂಬಲಿತ ಸದಸ್ಯರು ಇನಾಯತ್ ಅಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇದೆ.

Join Whatsapp