ಗಾಂಜಾ ಸಾಗಾಟ: ಮಂಗಳೂರಿನಲ್ಲಿ‌ ಮೂವರ ಬಂಧನ

Prasthutha|

ಬಜಪೆ: ಬಜಪೆ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರ ಬಂಧನವಾಗಿದೆ. ಸ್ಕೂಟರ್‌ನಲ್ಲಿ ಬರುತ್ತಿದ್ದ ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಕಾಜಿಲ್‌ ಎಂಬಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ಸಂಬಂಧ ಮೂರು ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

- Advertisement -

ತೇಜಾಕ್ಷ ಪೂಜಾರಿ (22), ಸಂತೋಷ್‌ ಪೂಜಾರಿ (24) ಮತ್ತು ಅಬೂಬಕ್ಕರ್‌ ಸಿದ್ದಿಕ್‌ (26) ಬಂಧಿತರು. ಬಂಧಿತರಿಂದ 340 ಗ್ರಾಂ ಗಾಂಜಾ, 40 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಸೇರಿ ಒಟ್ಟು 46 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸ್ಕೂಟರ್‌ನಲ್ಲಿ ಬರುತ್ತಿದ್ದ ಮೂವರನ್ನು ಎಸ್‌ಐ ಗುರಪ್ಪ ಕಾಂತಿ ತಡೆದಾಗ ಅವರು ಸ್ಕೂಟರ್‌ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಗಾಂಜಾ ಸಾಗಿರುವುದು ತಿಳಿದುಬಂದಿದೆ. ಗಾಂಜಾವನ್ನು ವಶಡಿಸಿಕೊಳ್ಳಲಾಗಿದೆ.