ಬೆಂಗಳೂರು: ಗಣೇಶೋತ್ಸವಕ್ಕೆ ಪ್ರತಿಸ್ಠಾಪಿಸಿದ್ದ ಮೂರ್ತಿ ವಿರೂಪಗೊಳಿಸಿ, ಗಣೇಶ ಚತುರ್ಥಿಯ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಪ್ರಕರಣದಲ್ಲಿ ಐವರು ಹಿಂದುತ್ವ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂದು ಗುರುತಿಸಲಾಗಿದೆ.
ಗಣೇಶೋತ್ಸವದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಈ ದುಷ್ಕರ್ಮಿಗಳು ವಿರೂಪಗೊಳಿಸಿದ್ದು , ಜೊತೆಗೆ ಹಬ್ಬದ ಶುಭಾಶಯಗಳನ್ನು ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗಳು ಮತ್ತು ಅಲ್ಲೇ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಸೀಟುಗಳನ್ನು ಬ್ಲೇಡ್ ನಿಂದ ಕೊಯ್ದು ಹಾಕಿದ್ದರು.
ಕುಂಬಾರಪೇಟೆಯಲ್ಲಿ 4, ಬಾಬುರಾವ್ ಬೀದಿಯಲ್ಲಿ 1, ಕುಪ್ಪಶೆಟ್ಟಿ ಬಾವಿ ಬೀದಿ ಬಳಿ 1, ಶ್ರೀಧರ್ಮರಾಯಸ್ವಾಮಿ ದೇವಸ್ಥಾನದ ಬಳಿ 1, ಸಿಪಿ ರಸ್ತೆಯಲ್ಲಿ 1 ಕೆ.ಎಂ.ಅರ್. ಸ್ಟೋರ್ಸ್ ಬಳಿ 1 ಸೇರಿ ಒಟ್ಟು 9ಕಡೆ ಹೀಗೆ ವಿವಿದೆಡೆ ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿರುವುದು ವರದಿಯಾಗಿದ್ದು ಘಟನೆಯ ಮಾಹಿತಿ ತಿಳಿದ ಮಾಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧಾರದ ಮೇರೆಗೆ ಈ ಐವರನ್ನು ಬಂಧಿಸಿದ್ದಾರೆ.
ಈ ಐವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಹಲವರು ಬಂಧಿತರ ಪರ ಠಾಣಾ ಮುಂಭಾಗದಲ್ಲಿ ರಾದ್ದಾಂತ ನಡೆಸಿದ್ದರು ಎನ್ನಲಾಗಿದೆ.