‘ಸಾವರ್ಕರ್ ಕ್ಷಮೆಯಾಚನೆ ಹಿಂದೆ ಗಾಂಧೀಜಿ ಪಾತ್ರವಿಲ್ಲ’: ರಾಜನಾಥ್ ಸಿಂಗ್ ಹೇಳಿಕೆಗೆ ಗಾಂಧಿ ಮೊಮ್ಮಗ ತಿರುಗೇಟು

Prasthutha|

ಮುಂಬೈ: ಗಾಂಧೀಜಿಯ ಸೂಚನೆ ಮೇರೆಗೆ ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಕ್ಷಮೆಯಾಚಿಸಿದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿ ಅಲ್ಲಗಳೆದಿದ್ದಾರೆ.

- Advertisement -

ಇದು ಇತಿಹಾಸವನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಕೆಟ್ಟ ಪ್ರಯತ್ನದ ಭಾಗವಾಗಿದೆ ಎಂದು ಅವರು ಆರೋಪಿಸಿದರು.

“ಅಗತ್ಯಕ್ಕೆ ತಕ್ಕಂತೆ ಇತಿಹಾಸವನ್ನು ತಿರುಚುವುದು ಬಿಜೆಪಿಗೆ ಕೆಟ್ಟ ಅಭ್ಯಾಸವಾಗಿ ಬಿಟ್ಟಿದೆ. ಗಾಂಧೀಜಿಯವರ ಸೂಚನೆಯ ಮೇರೆಗೆ ಸಾವರ್ಕರ್ ಕ್ಷಮೆಯಾಚಿಸಿದರು ಎಂಬ ವಾದವು ಶುದ್ಧ ಸುಳ್ಳು.ಕ್ಷಮೆಯಾಚನೆಗೆ ಬೆಂಬಲ ನೀಡಬೇಕೆಂದು ಸಾವರ್ಕರ್ ಸಹೋದರ ಒಮ್ಮೆ ಗಾಂಧಿಯನ್ನು ಭೇಟಿ ಮಾಡಿದ್ದ. ನಿಮಗೆ ಕ್ಷಮೆಯಾಚಿಸಲೇಬೇಕೆಂದಾದರೆ ಯಾಚಿಸಿಬಿಡಿ ಎಂದು ಆ ಸಮಯದಲ್ಲಿ ಗಾಂಧೀಜಿ ಹೇಳಿದ್ದರು. ಆದರೆ ಅದಕ್ಕೂ ಮೊದಲು ಸಾವರ್ಕರ್ 11 ಬಾರಿ ಕ್ಷಮೆ ಕೇಳಿದ್ದರು. ಅದನ್ನೆಲ್ಲ ಮರೆಮಾಚುವ ಮೂಲಕ ಬಿಜೆಪಿ ಸುಳ್ಳು ಪ್ರಚಾರ ನಡೆಸುತ್ತಿದೆ” ಎಂದು ತುಷಾರ್ ಗಾಂಧಿ ಹೇಳಿದರು.

Join Whatsapp