ಬೆಂಗಳೂರು: ಬಲಪಂಥೀಯರೇ ಗಾಂಧಿಯನ್ನು ಕೊಂದು ಹಾಕಿರೋದು. ಗಾಂಧಿ ಕೊಂದ ಗೋಡ್ಸೆಯನ್ನು ಪೂಜೆ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ ವಿಚಾರ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು ಪ್ರಸ್ತುತತೆ 19-20ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಂದಿಗೂ ಅದು ಪ್ರಸ್ತುತ. ಗಾಂಧಿಯನ್ನ ಮರೆತರೆ ಇಡೀ ಸಮಾಜವನ್ನೇ ಮರೆತ ಹಾಗೆ, ವಿಶ್ವವನ್ನ ಮರೆತ ಹಾಗೆ. ಗಾಂಧಿ ವಿಚಾರ ಮೆಲುಕು ಹಾಕಬೇಕು. ಆ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು ಅವಶ್ಯಕ ಎಂದು ತಿಳಿಸಿದರು.
ಕೋಮು ಸಂಘರ್ಷ ಶುರು ಆಗಿದೆ, ಇದು ಇರಬಾರದು. ಹುಟ್ಟುವಾಗ ಎಲ್ಲ ವಿಶ್ವಮಾನವ, ಬೆಳೆಯುತ್ತ ಅಲ್ಪ ಮಾನವರಾಗುತ್ತಾರೆ ಅಂತಾ ಕುವೆಂಪು ಹೇಳಿದ್ದಾರೆ. ವಿಶ್ವ ಮಾನವ ಆಗೋದು ಕಷ್ಟ. ಆ ದಾರಿಯಲ್ಲಿ ಬೆಳೆಯೋದು ಕಷ್ಟ ಆಗಲ್ಲ. ಅಸಹನೆ ಬೆಳೆಸಿಕೊಳ್ಳುವುದು ಇರಬಾರದು. ಹೊಂದಾಣಿಕೆ, ಸೌಹಾರ್ದತೆಯಿಂದ ಬಾಳಬೇಕು ಎಂದರು.