ಗಾಂಧಿ ಜಯಂತಿ ಪ್ರಯುಕ್ತ ಎಸ್ ಡಿ ಪಿ ಐ ತುಂಬೆ ಗ್ರಾಮ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

Prasthutha|

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತುಂಬೆ ಗ್ರಾಮ ಸಮಿತಿ ಹಾಗೂ ಫಾದರ್ ಮುಲ್ಲರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ತುಂಬೆ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ  ರಕ್ತದಾನ ಶಿಬಿರವನ್ನು ಫಾದರ್ ಮುಲ್ಲರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತುಂಬೆಯಲ್ಲಿ ಹಮ್ಮಿಕೊಳ್ಳಲಾಯಿತು.

- Advertisement -

ಎಸ್ ಡಿ ಪಿ ಐ ಸಂಗಬೆಟ್ಟು ಬ್ಲಾಕ್ ಅಧ್ಯಕ್ಷರಾದ ಇರ್ಫಾನ್ ತುಂಬೆ ರಕ್ತದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ತದಾನದ ಮಹತ್ವವನ್ನು ವಿವರಿಸಿ,  ಎಸ್ ಡಿ ಪಿ ಐ ತುಂಬೆ ಗ್ರಾಮ ಸಮಿತಿಯು ಹಮ್ಮಿಕೊಂಡಿರುವ ರಕ್ತದಾನ ಶಿಬಿರದಂತಹ ಮಾನವೀಯ ಸೇವೆಯನ್ನು ಶ್ಲಾಘಿಸಿದರು.

- Advertisement -

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಅನ್ವರ್ ಬಡಕಬೈಲ್ , ಫಾದರ್ ಮುಲ್ಲರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ ಆಡಳಿತ ಅಧಿಕಾರಿ ಫಾದರ್ ಸಿಲ್ವರ್‌ಸ್ಟಾರ್ ವಿನ್ಸೆಂಟ್ ಲೋಬೋ , ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ತುಂಬೆ ಇದರ ಮಾಜಿ ಅಧ್ಯಕ್ಷರಾದ ಇಂತಿಯಾಝ್ ತುಂಬೆ , ತುಂಬೆ ಜುಮ್ಮಾ ಮಸ್ಜಿದ್ ಇದರ ಕಾರ್ಯದರ್ಶಿ ಮೂಸಬ್ಬ ತುಂಬೆ , ತುಂಬೆ ಗ್ರಾಮ ಪಂಚಾಯತಿ ಸದಸ್ಯರಾದ ಝಹೂರ್ ತುಂಬೆ, ಅಝೀಝ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿ ಎ ತುಂಬೆ ಪ್ರೌಢ ಶಾಲೆಯಿಂದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ತುಂಬೆ ಗ್ರಾಮದ ನಾಲ್ಕು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



Join Whatsapp