G20 ಶೃಂಗಸಭೆ: ಪ್ರಧಾನಿ ಮೋದಿ ಮುಂದೆ ಇಂಡಿಯಾ ಬದಲು ‘ಭಾರತ್’ ನಾಮಫಲಕ

Prasthutha|

ದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಉದ್ಘಾಟನಾ ಭಾಷಣ ಮಾಡಿದ್ದಾರೆ.

- Advertisement -

ಅಲ್ಲಿನ ವಿಡಿಯೊ ನೋಡಿದರೆ ಪ್ರಧಾನಿಯ ಮುಂದೆ ಇಡಲಾದ ನಾಮಫಲಕದಲ್ಲಿ ಇಂಡಿಯಾ ಬದಲಿಗೆ ಭಾರತ್ ಎಂದು ಬರೆಯಲಾಗಿದೆ.

ಈ ವಾರಾಂತ್ಯದಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿ ನೀಡಿದ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆದಿದ್ದು, ಇದು ಭಾರೀ ಚರ್ಚೆಗೀಡಾಗಿತ್ತು.

Join Whatsapp