ಜಿ20 ಶೃಂಗಸಭೆ: ದೆಹಲಿಯಲ್ಲಿ ಸ್ವಿಗ್ಗಿ, ​ಅಮೆಜಾನ್ ಸೇರಿದಂತೆ ಆನ್​ಲೈನ್ ಡೆಲಿವರಿಗೆ ನಿಷೇಧ

Prasthutha|

ದೆಹಲಿ: ಜಿ20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ಸೆಪ್ಟೆಂಬರ್ 8 ರಿಂದ 10ರವರೆಗೆ ಆನ್​ಲೈನ್ ಆಹಾರ ವಿತರಣೆಯನ್ನು ನಿಷೇಧಿಸಲಾಗಿದೆ.

- Advertisement -

ಈ ಅವಧಿಯಲ್ಲಿ, ದೆಹಲಿ ಜನ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುವುದಿಲ್ಲ. ಸ್ವಿಗ್ಗಿ, ಅಮೆಜಾನ್​ ಸೇರಿದಂತೆ ಇತರೆ ಆನ್​ಲೈನ್ ವಿತರಣೆಯನ್ನು ತಡೆಹಿಡಿಯಲಾಗಿದೆ. ಇದರಿಂದಾಗಿ ಆನ್‌ಲೈನ್ ಆಹಾರ ಸೇವೆಗಳು ಲಭ್ಯವಿರುವುದಿಲ್ಲ. ಯಾವುದೇ ಆನ್‌ಲೈನ್ ವಿತರಣೆಯನ್ನು ಅನುಮತಿಸಲಾಗುವುದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಹೇಳಿದ್ದಾರೆ.

ಸೆಪ್ಟೆಂಬರ್ 7 ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 10 ರ ಮಧ್ಯರಾತ್ರಿಯವರೆಗೆ ದೆಹಲಿಯಲ್ಲಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಗುರುಗ್ರಾಮ್ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಂಚಾರ ನಿರ್ಬಂಧಗಳು ಮುಖ್ಯವಾಗಿ ಧೌಲಾ ಕುವಾನ್ ಮಾರ್ಗದ ಮೇಲೆ ಪರಿಣಾಮ ಬೀರುತ್ತವೆ. ಸೆಪ್ಟೆಂಬರ್ 8 ರಂದು ಮನೆಯಿಂದ ಕೆಲಸ ನೀತಿಯನ್ನು ಜಾರಿಗೆ ತರಲು ಗುರುಗ್ರಾಮದ ಕಂಪನಿಗಳಿಗೆ ಪೊಲೀಸರು ಸಲಹೆ ನೀಡಿದ್ದಾರೆ.

- Advertisement -

ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 8 ರಿಂದ 10 ರವರೆಗೆ ಸಾರ್ವಜನಿಕ ರಜೆ ಘೋಷಿಸಿದೆ.

Join Whatsapp