ಫಂಡಿಂಗ್ ಆರೋಪ: ಸತ್ಯಜಿತ್ ಸುರತ್ಕಲ್ ತಾಕತ್ತಿದ್ದರೆ 24 ಗಂಟೆಯೊಳಗೆ ಸಾಕ್ಷಿ ಸಮೇತ ಆರೋಪ ನಿರೂಪಿಸಲಿ: SDPI ಸವಾಲು

Prasthutha|

►ಸತ್ಯಜಿತ್ ಹೇಳಿಕೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಎಸ್ ಡಿಪಿಐ

- Advertisement -

ಮಂಗಳೂರು: ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಸಂದರ್ಭದಲ್ಲಿ ಬಜರಂಗದಳದ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಎಸ್ ಡಿಪಿಐ ಮೇಲೆ ಕಪೋಲಕಲ್ಪಿತ ಫಂಡಿಂಗ್ ಆರೋಪ ಹೊರಿಸಿರುವುದು ಖಂಡನಾರ್ಹ,  ಮಾಡಿದ ಆರೋಪವನ್ನು ತಾಕತ್ತಿದ್ದರೆ 24 ಗಂಟೆಯೊಳಗೆ ಸಾಕ್ಷಿ ಸಮೇತ ನಿರೂಪಿಸಲಿ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸವಾಲು ಹಾಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ, ಸುರತ್ಕಲ್ ಭಾಗದಲ್ಲಿ ಅಶಾಂತಿ, ದೊಂಬಿ ಹಿಂದೂ-ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ರಾಜಕೀಯವಾಗಿ ಬೆಳೆಯಬೇಕು ಎಂಬ ಆಸೆಯು ಈಡೇರದೆ ಸಂಘಪರಿವಾರದ ಮೇಲುಸ್ತರದ ನಾಯಕರು ಇವರನ್ನು ಯೂಸ್ ಎಂಡ್ ತ್ರೋ ಆಗಿ ಬಳಸಿದ ಕೋಪವನ್ನು ತೀರಿಸಲು ಇನ್ನೊಂದು ರಾಜಕೀಯ ಪಕ್ಷದ ಮೇಲೆ ಸುಳ್ಳಾರೋಪ ಮಾಡಿ ಬಿಜೆಪಿ ಮೇಲಿರುವ ಕೋಪವನ್ನು ಈ ರೀತಿಯಲ್ಲಿ ತೋರ್ಪಡಿಸುವುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಅದಲ್ಲದೇ ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಲಭೆ ಸೃಷ್ಟಿಸಲು ನೇತೃತ್ವ ನೀಡಿದ್ದ ಸತ್ಯಜಿತ್, ಉಮಾ ಭಾರತಿ, ಪ್ರಹ್ಲಾದ್ ಜೋಶಿ, ಸೇರಿದಂತೆ ಹಲವಾರು ಸಂಘಪರಿವಾರ ನಾಯಕರು ಇಂದು ಶಾಸಕ, ಸಚಿವ, ಸಂಸದರಾಗಿದ್ದಾರೆ ,ಆದರೆ ಸತ್ಯಜಿತ್ ಅವರನ್ನು ಸಂಘಪರಿವಾರ ಬಳಸಿ ಬಿಸಾಕಿ ಮೂಲೆಗುಂಪು ಮಾಡಿದ್ದನ್ನು ಇವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇದೀಗ ಸುರತ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಗಾಗಿ  ಎಸ್‌ಡಿಪಿಐ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಸತ್ಯಜಿತ್ ಸುರತ್ಕಲ್ ಮಾಡಿದ ಆರೋಪವನ್ನು 24 ಗಂಟೆಯೊಳಗೆ ಸಾಕ್ಷಿ ಸಮೇತ ಬಹಿರಂಗ ಪಡಿಸಬೇಕು. ಇಲ್ಲದಿದ್ದಲ್ಲಿ ಪಕ್ಷವೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ. ಮಾತ್ರವಲ್ಲದೆ ಈ ವಿಚಾರದಲ್ಲಿ ಎಸ್ ಡಿಪಿಐ ಬಹಿರಂಗ ಚರ್ಚೆಗೆ ತಯಾರಿದೆ, ಆರೋಪ ನಿರೂಪಿಸುವ ಧೈರ್ಯ ವಿದ್ದರೆ ಸತ್ಯಜಿತ್ ಸುರತ್ಕಲ್ ಚರ್ಚೆಗೆ ಬರಲಿ ಎಂದು   ಅಬೂಬಕ್ಕರ್ ಕುಳಾಯಿ ಪತ್ರಿಕಾ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.



Join Whatsapp