ಸಂವಿಧಾನ ರಕ್ಷಣೆ ಗೆ ಅಂಬೇಡ್ಕರ್ ಮೊಮ್ಮಗನ ನೇತೃತ್ವದಲ್ಲಿ ಹೊಸ ಸಂಘಟನೆ ಅಸ್ತಿತ್ವಕ್ಕೆ

Prasthutha|

ನವದೆಹಲಿ: ಸಂವಿಧಾನದ ಮೂಲ ಸ್ವರೂಪವನ್ನು ರಕ್ಷಿಸುವ ಸಲುವಾಗಿ ದೇಶದ ಎಲ್ಲಾ ಗ್ರಾಮಗಳಲ್ಲಿ ಜನ ಜಾಗೃತಿ ಅಭಿಯಾನ ನಡೆಸಬೇಕಾಗಿದೆ ಎಂದು ಸಂವಿಧಾನ ರಕ್ಷಣಾ ಅಂದೋಲನದ ನೇತಾರ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಂಬೇಡ್ಕರ್ ತಿಳಿಸಿದ್ದಾರೆ.

- Advertisement -

ಶಾಸಕರ ಭವನದಲ್ಲಿ ಏರ್ಪಡಿಸಿದ ಸಂವಿಧಾನ ರಕ್ಷಣಾ ಆಂದೋಲನದ ಕರ್ನಾಟಕ ಘಟಕವನ್ನು ರಚಿಸುವ ಸಭೆಯಲ್ಲಿ ಮಾತನಾಡಿದ ಅವರು ವಾಮ ಮಾರ್ಗದ ಮೂಲಕ ಸಂವಿಧಾನಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿದೆ. ಸಂವಿಧಾನದ ಪ್ರಸ್ತಾವನೆಯನ್ನು ಬದಲಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ಇದರ ವಿರುದ್ಧ ಪ್ರತಿರೋಧ ಮೊಳಗಬೇಕಿದೆ ಎಂದು ಅವರು ತಿಳಿಸಿದರು.

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವವೇ ಸಂವಿಧಾನದ ತಳಹದಿಯ ಮೇಲೆ ನೆಲೆನಿಂತಿದೆ. ಸಂವಿಧಾನಕ್ಕೆ ಧಕ್ಕೆವುಂಟಾದರೆ ಈ ಎಲ್ಲಾ ಸಮುದಾಯಗಳು ಅಪಾಯ ಎದುರಿಸುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನದ ಮೂಲ ಸ್ವರೂಪದ ರಕ್ಷಣೆಗಾಗಿ ಪ್ರಬಲವಾದ ಹೋರಾಟದ ಅಗತ್ಯವಿದೆ ಎಂದು ಅವರು ಸಾಂದರ್ಭಿಕವಾಗಿ ನುಡಿದರು.

- Advertisement -

ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲಾ ಷಡ್ಯಂತ್ರ್ಯವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಸಂಘಟಿತವಾಗಿ ಹೋರಾಡುವುದು ಈ ಅಭಿಯಾನದ ಪ್ರಮುಖ ಧ್ಯೇಯ ಎಂದು ತಿಳಿಸಿದರು.

ವೇಧಿಕೆಯಲ್ಲಿ ಚಿತ್ರದುರ್ಗ ಛಲವಾದಿ ಮಹಾ ಸಂಸ್ಥಾನ ಮಠದ, ಶಿವ ಶರಣ ಬಸವ ನಾಗಿದೇವ ಸ್ವಾಮೀಜಿ, ಮೈಸೂರು ಉರಿಲಿಂಗಿ ಮಠ ಜ್ಞಾನ ಪ್ರಕಾಶ್ ಸ್ವಾಮೀಜಿ, ಅಬ್ದುಲ್ ಮಜೀದ್ ಮೈಸೂರು, ಸಿ.ಎಸ್ ಧ್ವಾರಕ್ ನಾಥ್, ಸ್ಟ್ಯಾನಿ ಪಿಂಟೋ, ಇಲ್ಯಾಸ್ ತುಂಬೆ, ಶಫಿ ಮಹಮ್ಮದ್, ಆ.ರಾ ಮಹೇಶ್, ಯಾಸೀರ್ ಹಸನ್, ಅಭಿಗೌಡ(ಚಿತ್ರ ನಿರ್ದೇಶಕ), ಭಾಸ್ಕರ್ ಪ್ರಸಾದ್,ಭೀಮ ಪುತ್ರಿ, ಅಲ್ಫಾನ್ಸೋ ಫ್ರಾಂಕೋ, ಮೌಲಾನ ಜಾಫರ್ ಫೈಝಿ,MK ಮೇತ್ರಿ, ರಾ ಚಿಂತನ್, AJ ಖಾನ್, ದೀಪು ಗೌಡ್ರು, ನಾಗರತ್ನ, ಅಫ್ಸರ್ ಕೊಡ್ಲಿಪೇಟೆ, ಬಾಳೆಕಾಯಿ ಶ್ರೀ ನಿವಾಸ್ ಹಾಗೂ ಹಲವಾರು ಪ್ರಗತಿಪರ ಚಿಂತಕರು, ದಲಿತ, ಅಲ್ಪಸಂಖ್ಯಾತ ಪರ ಮತ್ತು ಕನ್ನಡ ಪರ ಹೋರಾಟಗಾರರು , ಮಹಿಳಾ ಹೋರಾಟಗಾರರು ಪಾಲ್ಗೊಂಡಿದ್ದರು.



Join Whatsapp