ಸ್ಮಶಾನದಿಂದ ಆಸ್ಪತ್ರೆಗೆ; ಶಿವಮೊಗ್ಗದಲ್ಲೊಂದು ವಿಲಕ್ಷಣ ಘಟನೆ

Prasthutha|

ಶಿವಮೊಗ್ಗ: ಶವವನ್ನು ಸ್ಮಶಾನದಿಂದ ಆಸ್ಪತ್ರೆಗೆ ಸಾಗಿಸಿದ ಕುತೂಹಲಕಾರಿ ಘಟನೆ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಶವವನ್ನು  ನಗರದ ಮೆಗ್ಗಾನ್  ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

- Advertisement -

ಲಕ್ಕಿನಕೊಪ್ಪದ ಕಾಡಿನಲ್ಲಿ ಬೆಳಿಗ್ಗೆ ಉರುಳಿಹಳ್ಳಿ ಮಾರುತಿ‌ ಕ್ಯಾಂಪ್ ನಿವಾಸಿ ವಿಠಲ ಮತ್ತು ಅತನ ಸ್ನೇಹಿತರಿಬ್ಬರು ಕುಡಿದು ಮಲಗಿದ್ದರು. ವಿಠಲನ ಜೊತೆಯಲ್ಲಿ  ಮಲಗಿದ್ದ ಸ್ನೇಹಿತ ಎದ್ದು ಗ್ರಾಮಕ್ಕೆ ತೆರಳಿದ್ದು, ವಿಠಲ ಎದ್ದು ಬಂದಿಲ್ಲ.

ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠಲನ ಶವ ವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ವಿಷಯ ತಿಳಿದು ಆತನ ಕುಟುಂಬಸ್ಥರು ಬಂದು ಶವವನ್ನು ಕಾಡಿನಿಂದ ಕೊಂಡೊಯ್ದಿದ್ದಾರೆ.

- Advertisement -

ಹೆಚ್ಚು ಕುಡಿತದಿಂದ ಆತ‌ ಸತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಆತನ ಕುಟುಂಬಸ್ಥರು ಅಂತ್ಯ ಸಂಸ್ಥಾರಕ್ಕೆ ಗ್ರಾಮದ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದರು. ಆದರೆ, ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರೊಬ್ಬರು ಈ ಬಗ್ಗೆ ತುಂಗನಗರ ಪೊಲೀಸರಿಗೆ ದೂರು ನೀಡಿದ್ದಾರೆ.  ಪೊಲೀಸರು ಅಂತ್ಯ ಸಂಸ್ಕಾರವನ್ನ ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಿದ್ದಾರೆ.



Join Whatsapp