ಇನ್ನು ಮುಂದೆ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ಹೈಕೋರ್ಟ್

Prasthutha|

ನವದೆಹಲಿ: ಇನ್ನು ಮುಂದೆ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ವೀಡಿಯೋ ಫೂಟೇಜ್ ಜೊತೆ ಆಡಿಯೋ ಕೂಡ ಇರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

- Advertisement -

ನ್ಯಾಯಮೂರ್ತಿ ಅನು ಮಲ್ಹೋತ್ರಾ ಪೀಠದಲ್ಲಿ ಮಸೀದಿಯ ಇಮಾಮ್ ಆಗಿ ತಮ್ಮ ಅಧಿಕೃತ ಮತ್ತು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತಿರುವ ಕುರಿತು ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ನಬಿ ಕರೀಮ್ ಪೊಲೀಸ್ ಠಾಣೆಯ ವೀಡಿಯೋ ತುಣುಕನ್ನು ಸಂರಕ್ಷಿಸಲಾಗಿದ್ದರೂ, ಆಡಿಯೋ ದೃಶ್ಯಾವಳಿಗಳು ಲಭ್ಯವಿಲ್ಲದ ವಿಚಾರ ಪ್ರಸ್ತಾಪವಾಗಿದೆ. ಈ ವಿಚಾರ ತಿಳಿದ ಕೋರ್ಟ್, ಪೊಲೀಸ್ ಠಾಣೆಗಳ ಸಿಸಿಟಿವಿಯಲ್ಲಿ ಆಡಿಯೋ ಹಾಗೂ ವೀಡಿಯೋ ಫೂಟೇಜ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆದೇಶ ಹೊರಡಿಸಿದೆ.

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಜೊತೆಗೆ ಸರಿಯಾಗಿ ಆಡಿಯೋ ಮತ್ತು ವೀಡಿಯೋ ಅಳವಡಿಸಬೇಕು ಎಂದು ನ್ಯಾಯಾಲಯವು ಮೇ 27 ರಂದು ಆದೇಶ ಹೊರಡಿಸಿದೆ. ಪೊಲೀಸ್ ಠಾಣೆಯ ಲಾಕ್-ಅಪ್‍ಗಳು, ಕಾರಿಡಾರ್‌ಗಳು, ಎಂಟ್ರಿ ಜಾಗಗಳು, ಇನ್‍ಸ್ಪೆಕ್ಟರ್‌ಗಳ ಕೊಠಡಿಗಳು, ಸ್ಟೇಷನ್ ಹಾಲ್, ಮುಂತಾದ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Join Whatsapp