ಗೃಹ ಜ್ಯೋತಿ ಯೋಜನೆ: ಅರ್ಹ ಫಲಾನುಭವಿಗಳ ಮನೆಗೆ ಇಂದಿನಿಂದ ಶೂನ್ಯ ವಿದ್ಯುತ್​ ಬಿಲ್​ ದರ

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಇಂದಿನಿಂದ (ಆ.01) ಅನುಷ್ಠಾನಕ್ಕೆ ಬರಲಿದೆ.

- Advertisement -

ಅರ್ಹ ಫಲಾನುಭವಿಗಳು ಶೂನ್ಯ ಬಿಲ್ ಪಡೆಯಲಿದ್ದಾರೆ. ಒಂದು ವರ್ಷದಲ್ಲಿ ಮನೆಯಲ್ಲಿ ಬಳಸಲಾಗಿರುವ ಸರಾಸರಿ ಯೂನಿಟ್‌ ಲೆಕ್ಕ ಮಾಡಿ ಆ ಸರಾಸರಿಯಲ್ಲಿ ಮಾಸಿಕ 200ಕ್ಕಿಂತ ಕಡಿಮೆ ಯೂನಿಟ್‌ ವಿದ್ಯುತ್‌ ಬಳಸಿರುವ ನೋಂದಾಯಿತ ಫಲಾನುಭವಿಗಳಿಗೆ ‘ಗೃಹಜ್ಯೋತಿ’ ಯೋಜನೆ ಪ್ರಯೋಜನ ದೊರೆಯಲಿದೆ. ಆಗಸ್ಟ್‌ನಲ್ಲಿ ಬರುವ ಬಿಲ್‌ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡ  ಗ್ರಾಹಕರಿಗೆ ಅವರ ಮನೆಯ ವಿದ್ಯುತ್‌ ಬಿಲ್‌ ಶೂನ್ಯವಾಗಿರಲಿದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಜೂ.15 ರಿಂದ ಆರಂಭವಾಗಿದ್ದು, ಜು. 27 ಕೊನೆಯ ದಿನಾಂಕವಾಗಿತ್ತು. ಈ ಅವಧಿಯಲ್ಲಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಆಗಸ್ಟ್​ ತಿಂಗಳಲ್ಲಿ ಉಚಿತ ವಿದ್ಯುತ್​ ಸಿಗಲಿದೆ. ರಾಜ್ಯಾದ್ಯಂತ 1.40 ಕೋಟಿಗೂ ಹೆಚ್ಚು ಗ್ರಾಹಕರು ಗೃಹ ಜ್ಯೋತಿ ಯೊಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಶೇ 32ರಷ್ಟು ಜನರು ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ವರದಿಯಾಗಿದೆ. ಜುಲೈ 25 ರ ನಂತರ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಬಿಲ್ ಸಿಗಲಿದೆ.

- Advertisement -

2.14 ಕೋಟಿ ಗ್ರಾಹಕರು ಗೃಹಜ್ಯೋತಿಗೆ ಅರ್ಹತೆ ಪಡೆದಿದ್ದು, ಶೇ.66 ರಷ್ಟು ಫಲಾನುಭವಿಗಳು ನೋಂದಣಿಯಾಗಿ ಇಂದಿನಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.

Join Whatsapp