ಬಜಪೆ: ಕರಂಬಾರ್ ಫ್ರೆಂಡ್ಸ್ ಕ್ಲಬ್’ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ದ್ವಿತೀಯ ಬೃಹತ್ ರಕ್ತದಾನ ಶಿಬಿರ ಹಾಗೂ ವ್ಯದ್ಯಕೀಯ ಕಿಟ್ ಬಿಡುಗಡೆ ಕಾರ್ಯಕ್ರಮ ಯಶ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫುಜಾರಾ ಸಿಮೆಂಟ್ ಇಂಡಸ್ಟ್ರೀಸ್’ನ ಮಾಜಿ ಮಾರ್ಕೆಟಿಂಗ್ ಮ್ಯಾನೇಜರ್ ಕೆ. ಕೆ. ಬದ್ರುದ್ದೀನ್, ಯುವ ತರುಣರಲ್ಲಿ ಇಂತಹ ಸಮಾಜಮುಖಿ ಕೆಲಸಗಳು ನಡೆದರೆ ಈ ದೇಶದ ಭವಿಷ್ಯ ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ ಮಾತನಾಡಿ, ಫ್ರೆಂಡ್ಸ್ ಕ್ಲಬ್ ಕಳೆದ ಒಂದು ವರ್ಷದಿಂದ ಮಾಡಿದ ಕಾರ್ಯಕ್ರಮಗಳನ್ನು ಸ್ಮರಿಸಿ ಅದರ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
SDPI ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಬಜ್ಪೆ ಶಿಬಿರದ ಉದ್ದೇಶದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಮೂರು ಕುಟುಂಬಗಳಿಗೆ ವ್ಯದ್ಯಕೀಯ ನೆರವು ಹಾಗೂ ಧನ ಸಹಾಯ ನೀಡಲಾಯಿತು.
ವ್ಯದ್ಯಕೀಯ ಕಿಟ್ ಬಿಡುಗಡೆಗೊಳಿಸಿದ ಫ್ರೆಂಡ್ಸ್ ಕ್ಲಬ್ ಮುಂದಿನ ದಿನಗಳಲ್ಲಿ ಯಾರಿಗಾದರೂ ಬೇಕಾದಲ್ಲಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಫ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವದ ಅಂಗವಾಗಿ ನಡೆದಂತಹ “” ಲಕ್ಕಿ ಡ್ರಾ “” ದಲ್ಲಿ ಪ್ರಥಮ ಬಹುಮಾನ ನಂ.0576, ದ್ವಿತೀಯ ನಂ.0997 ಹಾಗೂ ತೃತೀಯ ನಂ.0561 ಈ ಮೇಲಿನ ಸಂಖ್ಯೆಗಳಿಗೆ ಬಂದಿವೆ ಎಂದು ಪ್ರಕಟಿಸಲಾಯಿತು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ಮುಖಂಡರಾದ ಮಂಜು ಪ್ರಸಾದ್ ಕೆಂಜಾರ್, ರಾಜೇಶ್ ಅಮೀನ್, ಸುಪ್ರಿತಾ ಶೆಟ್ಟಿ, ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಅಬ್ದುಲ್ ಕರೀಂ, ಸೇಸಪ್ಪ, ಝರಿಯಾ ಬಜ್ಪೆ,K.I. ಯೂಸುಫ್, ನಿಸಾರ್ ಬಜ್ಪೆ,ಸಿರಾಜ್ ಹುಸೇನ್, ಜಾಲಾಲುದ್ದಿನ್ ಉಪಸ್ಥಿತರಿದ್ದರು, ಹಸೈನಾರ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ವಾಚಿಸಿದರು.