ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಗೆ 2022ರ ನೊಬೆಲ್ ಸಾಹಿತ್ಯ ಪ್ರಶಸ್ತಿ

Prasthutha|

ನವದೆಹಲಿ: 2022ರ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ 82 ವರ್ಷದ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರು ಭಾಜನರಾಗಿದ್ದಾರೆ.

- Advertisement -

ಅವರು ರಚಿಸಿರುವ 20ಕ್ಕೂ ಹೆಚ್ಚು ಪುಸ್ತಕಗಳಲ್ಲಿ ಹೆಚ್ಚನವುಗಳು ಚಿಕ್ಕ ಅಧ್ಯಾಯಗಳಿರುವ ಪುಸ್ತಕಗಳೇ ಆಗಿದ್ದು, ಉತ್ತಮ ಸಂದೇಶವನ್ನು ನೀಡಿದೆ. ಈ ಪುಸ್ತಕಗಳೆಲ್ಲ ಅವರು ಜೀವನದಲ್ಲಿ ಎದುರಿಸಿದ ಸತ್ಯದ ಸಂಗತಿಗಳು, ನೈಜ ಘಟನೆಗಳು, ಹಾಗೂ ಪರರ ಜೀವನವನ್ನೇ ಪ್ರತಿಬಿಂಬಿಸಿದೆ ಎಂದು ನೊಬೆಲ್ ಪ್ರಶಸ್ತಿ ಮೂಲಗಳು ತಿಳಿಸಿವೆ.

ಬದುಕಿನ ಚಿತ್ರಣವನ್ನು ಬಿತ್ತರಿಸಿದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ ಅನ್ನಿ ಎರ್ನಾಕ್ಸ್ ಎಂದೂ ಹೇಳಿದೆ.

- Advertisement -

1940ರಲ್ಲಿ ನಾರ್ಮಂಡಿಯ ಯ್ವೆಟಾಟ್ ಎಂಬ ಸಣ್ಣ ಪಟ್ಟಣದಲ್ಲಿ ಅನ್ನಿ ಎರ್ನಾಕ್ಸ್ ಜನಿಸಿದರು. ಆಧುನಿಕ ಸಾಹಿತ್ಯದಲ್ಲಿ ಉನ್ನತ ಪದವಿಯನ್ನು ಪಡೆದುಕೊಂಡ ಇವರು 1974ರಲ್ಲಿ ಅವರ ಮೊದಲ ಪುಸ್ತಕ “ಕ್ಲೀನ್ಡ್ ಔಟ್” ಪ್ರಕಟಣೆಯೊಂದಿಗೆ ಮಾದರಿ ಸಾಹಿತ್ಯಿಕ ವೃತ್ತಿಜೀವನ ಪ್ರಾರಂಭಿಸಿದರು.

” ಸರಳವಾದ ಭಾಷೆಯಲ್ಲಿ ಸ್ವಚ್ಛವಾದ ಭಾವದಲ್ಲಿ ತನ್ನ ಜೀವನದ ಆಗು ಹೋಗುಗಳನ್ನು ಸಾಹಿತ್ಯ ರೂಪದಲ್ಲಿ ಅಚ್ಚುಕಟ್ಟಾಗಿ ವ್ಯಕ್ತಪಡಿಸಿದ್ದಕ್ಕೆ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ” ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ತಿಳಿಸಿದ್ದಾರೆ.



Join Whatsapp