ರಫೇಲ್ ಹಗರಣ| ಪೂರಕ ಸಾಕ್ಷ್ಯಾಧಾರಗಳ ಹೊರತಾಗಿಯೂ ಭಾರತೀಯ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ: ಫ್ರೆಂಚ್ ಮಾಧ್ಯಮ

Prasthutha|

ಹೊಸದಿಲ್ಲಿ: ರಫೇಲ್ ಹಗರಣದಲ್ಲಿ ಸ್ಪಷ್ಟ ಪುರಾವೆಗಳಿದ್ದರೂ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ ಎಂದು ಫ್ರೆಂಚ್ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ವರದಿ ಮಾಡಿದೆ.

- Advertisement -

ಹಣವನ್ನು ವರ್ಗಾವಣೆ ಮಾಡಲು ಡಸಾಲ್ಟ್ ಏವಿಯೇಷನ್ ನಕಲಿ ಇನ್ವಾಯ್ಸ್ಗಳನ್ನು ಬಳಸಿದೆ. 2018ರಲ್ಲಿಯೇ ಲಂಚದ ಪುರಾವೆ ಸಿಕ್ಕಿದ್ದರೂ ತನಿಖಾ ಸಂಸ್ಥೆಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವರದಿ ಹೇಳಿದೆ.
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನಿಂದ ಭಾರತವು 36 ಯುದ್ಧವಿಮಾನಗಳನ್ನು ಖರೀದಿಸುವಲ್ಲಿ ಲಂಚದ ಆರೋಪವನ್ನು ದೃಢಪಡಿಸುವ ದಾಖಲೆಗಳನ್ನು ಮೀಡಿಯಾಪಾರ್ಟ್ ಬಿಡುಗಡೆ ಮಾಡಿದೆ.

ಭಾರತವು ಡಸಾಲ್ಟ್ ಏವಿಯೇಷನ್ನಿಂದ 36 ಫೈಟರ್ ಜೆಟ್ಗಳನ್ನು 7.8 ಬಿಲಿಯನ್ ಯುರೋಗಳಿಗೆ ಖರೀದಿಸಿದೆ. ಇದರಲ್ಲಿ ಮಧ್ಯವರ್ತಿಗೆ 65 ಕೋಟಿ ರೂಪಾಯಿ ಲಭಿಸಿದೆ ಎಂದು ಹೇಳಲಾಗಿದೆ.



Join Whatsapp