ಸ್ವಾತಂತ್ರ್ಯ ನಡಿಗೆ: 50 ಸಾವಿರ ಮೆಟ್ರೋ ಟಿಕೆಟ್ ಖರೀದಿಸಿದ ಕಾಂಗ್ರೆಸ್

Prasthutha|

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದಾರೆ.

- Advertisement -

ಕಾಂಗ್ರೆಸ್ ನಡಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನಿಗಮದಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳನ್ನು ಕಾಂಗ್ರೆಸ್ ಖರೀದಿ ಮಾಡಿದೆ. ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಲಿದ್ದು, ಬರುವ ಕಾರ್ಯಕರ್ತರು ಕಾರ್ಯಕ್ರಮಕ್ಕೆ ತೆರಳಲು ಕೆಪಿಸಿಸಿ ಮೆಟ್ರೋ ಟಿಕೆಟ್ ಖರೀದಿಸಿದೆ.

ಪ್ರತಿಯೊಬ್ಬರಿಗೂ ಟಿ-ಶರ್ಟ್ , ಕ್ಯಾಪ್, ಕಿಟ್ ವಿತರಣೆ ಮಾಡಲಾಗಿದೆ. ಫ್ರೀಡಂ ಮಾರ್ಚ್ ವ್ಯವಸ್ಥೆಗಾಗಿ 11 ಉಪಸಮಿತಿ ರಚನೆ ಮಾಡಲಾಗಿದೆ. ಈ ಪಾದಯಾತ್ರೆಗೆ ಸುಮಾರು 75 ಸಾವಿರಕ್ಕೂ ಹೆಚ್ಚು ಜನರು ಆನ್ ಲೈನ್ ನೋಂದಣಿ ಮಾಡಿದ್ದಾರೆ.

- Advertisement -

ಈ ಪಾದಯಾತ್ರೆಗೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕನಕಪುರ, ಹೊಸರು ಭಾಗಗಳಿಂದ ಜನರು ಭಾಗವಹಿಸುತ್ತಿದ್ದಾರೆ.

Join Whatsapp