October 5, 2020

ಕಣ್ಮರೆಯಾದ ಸ್ವಾತಂತ್ರ್ಯ ಹೋರಾಟಗಾರ ಪುತ್ತೂರಿನ ಇಬ್ರಾಹೀಂ ಹಾಜಿ

ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕೃಷಿಕ ಬೊಳ್ಳಾಡಿ  ಇಬ್ರಾಹೀಂ ಹಾಜಿ ರವಿವಾರದಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

1934ರಲ್ಲಿ ಮಹಾತ್ಮಾಗಾಂಧಿ ಪುತ್ತೂರಿಗೆ ಆಗಮಿಸಿದ್ದಾಗ ಇಬ್ರಾಹೀಂ ಹಾಜಿಯವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರು ಗಾಂಧೀಜಿಯವರೊಂದಿಗೆ ಬೆಂಗಳೂರಿನ ತನಕ ನಡೆದಿದ್ದರು.

ಸ್ವಾತಂತ್ರ್ಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ತನಗೆ ಲಾಠಿ ಏಟು ಬಿದ್ದಿರುವುದಾಗಿ ಅವರು ಸ್ವತ: ಹೇಳಿದ್ದರು. ಇಬ್ರಾಹೀಂ ಹಾಜಿಯವರು ಒಳಮೊಗರು ಗ್ರಾಮ ಪಂಚಾಯತ್ ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಶೇಖ್ ಮಳೆ ಜಮಾಅತ್ ನ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ರಾಜ್ಯ ರೈತರ ಅಸೋಸಿಯೇಶನ್ ನಲ್ಲಿ ಸದಸ್ಯನಾಗಿದ್ದ ಇಬ್ರಾಹೀಂ ಹಾಜಿ ರೈತ ಆಂದೋಲನದ ಭಾಗವಾಗಿದ್ದರು.

ಹಾಜಿಯವರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಸಾವಿರಾರು ಬೆಂಬಲಿಗರನ್ನು ಅಗಲಿದ್ದಾರೆ.

ಅಂತಿಮ ಕ್ರಿಯೆಯೆಅನ್ನು ಶೇಖ್ ಮಳೆ ಮಸೀದಿ ಆವರಣದಲ್ಲಿ ನಡೆಸಲಾಯಿತು.

ಟಾಪ್ ಸುದ್ದಿಗಳು

ವಿಶೇಷ ವರದಿ