ಮಂಗಳೂರು: Friends forever ಸ್ನೇಹಿತರ ತಂಡವು ಕಳೆದ 4 ವರುಷಗಳಿಂದ ಸಜೀಪನಡು ಜಂಕ್ಷನ್ ನಲ್ಲಿ ನಡೆಸಿಕೊಂಡು ಬರುತ್ತಿರುವ Free ಇಫ್ತಾರ್ ಪಾಯಿಂಟ್ ಈ ವರ್ಷವೂ ನಡೆಯಲಿದೆ ಎಂದು ಸಂಘಟಕ ನವಾಝ್ ಸಜೀಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪವಿತ್ರ ರಂಝಾನ್ ತಿಂಗಳಿನಲ್ಲಿ ಇಫ್ತಾರ್ ಸಮಯದಲ್ಲಿ ಉಳ್ಳಾಲ, ಕಾಸರಗೋಡು, ಮೆಲ್ಕಾರ್ ಬಿಸಿರೋಡ್ ಪುತ್ತೂರು ಉಪ್ಪಿನಂಗಡಿ ಭಾಗಕ್ಕೆ ಪ್ರಯಾಣಿಸುವ ಮತ್ತು ವಿಶೇಷವಾಗಿ ದೇರಳಕಟ್ಟೆ ಪರಿಸರದಲ್ಲಿರುವ ಆಸ್ಪತ್ರೆಗೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ರೋಗಿಗಳಿಗೆ ಮತ್ತು ಇನ್ನಿತರ ಕೈಗಾರಿಕಾ ಉದ್ಯಮಿಗಳಿಗೆ, ಕೆಲಸಗಾರರಿಗೆ ತುಂಬಾ ಉಪಾಕಾರಿಯಾದ ಈ ಕಾರ್ಯವನ್ನು ಸತತ 4 ವರ್ಷಗಳಿಂದ ಉತ್ಸಾಹಿ ಸ್ನೇಹಿತರಾದ ತಾಹಿದ್ ಸಜಿಪ , ನಿಯಾಝ್ ಬಸ್ ಸ್ಟ್ಯಾಂಡ್ , ಸದಖತುಲ್ಲಾ , ತಬ್ಸೀರ್, ಆರಿಫ್ CBS, ಬದುರುದ್ದಿನ್, ಜಾಬೀರ್, ಲತೀಫ್ SN,ಸಿರಾಜ್ SM,ಲತೀಫ್ SM ಮತ್ತು ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ಎಲ್ಲ ಅಂಗಡಿಗಳ ಸಹಕಾರದಿಂದ ನಡೆಯುತ್ತಾ ಬರುತ್ತಿದ್ದು, ಈ ಪುಣ್ಯ ಕಾರ್ಯವನ್ನು ಈ ವರ್ಷವೂ ಮುಂದುವರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಇಫ್ತಾರ್ ಸಮಯದಲ್ಲಿ ಮುಡಿಪು- ಮೆಲ್ಕಾರ್ ಮಾರ್ಗವಾಗಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಇದರ ಉಪಯೋಗವನ್ನು ಪಡೆಯಬೇಕು ಎಂದು ನವಾಝ್ ಸಜೀಪ ವಿನಂತಿಸಿದ್ದಾರೆ.