ಕಿನ್ನಿಗೋಳಿ: ಶಾಂತಿನಗರ ಖಿಲ್‌ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ

Prasthutha|

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಇದರ ಸಹಯೋಗದಲ್ಲಿ ಶಾಂತಿನಗರ ಗುತ್ತಕಾಡು ಇಲ್ಲಿನ ಕೆಜೆಎಂ ಸಭಾಂಗಣದಲ್ಲಿ 45 ವರುಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕಾ ಶಿಬಿರ ನಡೆಯಿತು.

- Advertisement -


ಕಾರ್ಯಕ್ರಮವನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತಾಡಿ ಅವರು ಉದ್ಘಾಟಿಸಿದರು. ಖಿಲ್‌ರಿಯಾ ಜುಮಾ ಮಸೀದಿ ಖತೀಬರು ಉಮರುಲ್ ಫಾರೂಕ್ ಸಖಾಫಿ ಶುಭ ಹಾರೈಸಿದರು. ಕಾರ್ಯಕ್ರಮದ ಸಂಚಾಲಕ ಟಿಕೆ ಅಬ್ದುಲ್ ಖಾದರ್ ಪ್ರಾಸ್ತಾವಿಕ ಮಾತನಾಡಿದರು.


ಹಾಜಿ ಟಿಎಚ್ ಮಯ್ಯದ್ದಿ ಹಾಗೂ ಶ್ರೀಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ವಿವೇಕಾನಂದ ಅವರಿಗೆ ಕೋವಿಡ್ ಲಸಿಕೆ ಚುಚ್ಚುಮದ್ದು ನೀಡುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

- Advertisement -


ಕಾರ್ಯಕ್ರಮದಲ್ಲಿ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿತ್ರಾ, ತಾಲೂಕು ಪಂಚಾಯತ್ ಸದಸ್ಯ ದಿವಾಕರ್ ಕರ್ಕೇರ, ಖಿಲ್‌ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿಎ ಹನೀಫ್, ನೂರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಎಂ. ಖಾದರ್ ಉಪಸ್ಥಿತರಿದ್ದರು.


ಜೆಎಚ್ ಜಲೀಲ್ ನಿರೂಪಿಸಿ, ವಂದಿಸಿದರು. ಜಮಾಅತ್ ಕಮಿಟಿ, ಕೋವಿಡ್ ಹೆಲ್ಪ್ ಲೈನ್ ಹಾಗೂ ನೂರುಲ್ ಹುದಾ ಸದಸ್ಯರು ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು. ಕಾರ್ಯಕ್ರಮದಲ್ಲಿ 206 ಮಂದಿಗೆ ಲಸಿಕೆ ನೀಡಲಾಯಿತು.



Join Whatsapp