ಅಮರಾವತಿ: ಕರ್ನಾಟಕ ಮತ್ತು ತೆಲಂಗಾಣದ ಮಹಿಳೆಯರಂತೆ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರು ಉಚಿತ ಪ್ರಯಾಣ ಮಾಡಲಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಸ್ಟ್ 15 ರಂದು ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಲಿದ್ದಾರೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಚುನಾವಣಾ ಭರವಸೆಗಳನ್ನು ಜಾರಿಗೆ ತರಲು ಆರಂಭಿಸಿದ್ದಾರೆ. APSRTC ಉಚಿತ ಬಸ್ ಯೋಜನೆಯನ್ನು ಎಪಿ ರಾಜ್ಯ ಸಾರಿಗೆ, ಕ್ರೀಡೆ ಮತ್ತು ಯುವಜನ ಸೇವೆಗಳ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅವರು ಪ್ರಾರಂಭಿಸಿದ್ದಾರೆ.
ಚನಾವಣೆಗೆ ಮುನ್ನ ‘ಸೂಪರ್ ಸಿಕ್ಸ್’ ಯೋಜನೆಗಳ ಭಾಗವಾಗಿ ಟಿಡಿಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ. ಪಲ್ಲೆ ವೆಲುಗು ಮತ್ತು ಎಕ್ಸ್‌ಪ್ರೆಸ್ ಬಸ್‌ಗಳು ಈ ಸೌಲಭ್ಯವನ್ನು ನೀಡಲಿವೆ. ಆಂಧ್ರಪ್ರದೇಶದ ಗಡಿಗಳಲ್ಲಿ ಅಂತರರಾಜ್ಯ ಪ್ರಯಾಣಕ್ಕೂ ಈ ಯೋಜನೆ ಅನ್ವಯಿಸುತ್ತದೆ.
ಸೂಪರ್ ಸಿಕ್ಸ್ ಸ್ಕೀಮ್” ಎಂದು ಕರೆಯಲ್ಪಡುವ ಈ ವಿನೂತನ ಯೋಜನೆಗಳ ಮೂಲಕ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಮೂಲಕ ಮಹಿಳೆಯರು, ಬಾಲಕಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಉಚಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ. ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಿಸಲಾಗುತ್ತದೆ ಎಂದು ಕಂದಾಯ ಸಚಿವ ಸತ್ಯ ಪ್ರಸಾದ್ ಅನಗಾನಿ ಹೇಳಿದ್ದಾರೆ.