ವಾಯ್ಸ್ ಆಫ್ ಬ್ಲಡ್ ಡೋನರ್ಸ್‍ ಗೆ  ಉಚಿತ ಆಂಬುಲೆನ್ಸ್ ಹಸ್ತಾಂತರ

Prasthutha|

ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ ಅಧ್ಯಕ್ಷ ಓಸ್ವಾಲ್ಡ್ ಪುರ್ಟಾಡೊ ಅವರು  ತನ್ನ ಹೆತ್ತವರಾದ ದಿ.ನತಾಲಿಯಾ ಪೆಡ್ರಿಕ್ ಪುರ್ಟಾಡೊ ರವರ ಸ್ಮರಣಾರ್ಥ  ಉಚಿತ ಸೇವೆಗಾಗಿ  ಕೊಡುಗೆಯಾಗಿ ಆಂಬುಲೆನ್ಸ್ ನೀಡಿದ್ದು ಇದರ ಹಸ್ತಾಂತರ  ರಾವ್ ಆಂಡ್ ರಾವ್ ಸರ್ಕಲ್ ಬಳಿ ಮಂಗಳವಾರ ನಡೆಯಿತು.

- Advertisement -

ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿದ್ದ ನಿವೃತ್ತ ಸುಬೇದಾರ್ ಅಪ್ಪು ಶೆಟ್ಟಿ  ಅವರು ಗಣ್ಯರ ಸಮ್ಮುಖ ಆಂಬುಲೆನ್ಸ್ ಕೀ ಯನ್ನು  ವಾಯ್ಸ್ ಆಪ್ ಬ್ಲಡ್ ಡೋನರ್ಸ್ ಇದರ ಸ್ಥಾಪಕಾಧ್ಯಕ್ಷ  ರವೂಫ್ ಬಂದರ್ ರವರಿಗೆ ಹಸ್ತಾಂತರಿಸಿ, ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಸೇವೆಯನ್ನು ಸಮಾಜಮುಖೀ ಚಟುವಟಿಕೆಯ ಮೂಲಕವೂ ನಡೆಸಬಹುದು ಇದಕ್ಕೆ ಈ ಸಂಸ್ಥೆ ಉತ್ತಮ ಉದಾಹರಣೆ ಎಂದರು.

ರವೂಫ್ ಬಂದರ್ ಮಾತನಾಡಿ,  ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ತರ ಶ್ರೇಯೋಭಿವೃದ್ಧಿ ಸಂಘ ,

- Advertisement -

ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು, ಲಯನ್ಸ್ ಕ್ಲಬ್ ಬಿಜೈ ಮಂಗಳೂರು, ಗ್ರೂಪ್ ಆಫ್ ತಾಜ್ ಮಂಗಳೂರು ಇದರ ಇದರ ಸಹಭಾಗಿತ್ವದಲ್ಲಿ ಸರಕಾರಿ ವೆನ್ಲೋಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ಇದರ ಸಹಯೋಗದಲ್ಲಿ  ದೇಶಕ್ಕಾಗಿ ಪ್ರಾಣ ತೆತ್ತ ಎಲ್ಲಾ ಯೋಧರ ಸ್ಮರಣಾರ್ಥ ಬ್ರಹತ್ ರಕ್ತದಾನ ಶಿಬಿರಆಯೋಜಿಸಿದ್ದೇವೆ. ಜತೆಗೆ ನಮ್ಮ ಸಂಸ್ಥೆಯ ಅಧ್ಯಕ್ಷರು  ತಮ್ಮ ಹೆತ್ತವರ ನೆನಪಿನಲ್ಲಿ ಉಚಿತ ಆಂಬುಲೆನ್ಸ್ ವಾಹನ ಒದಗಿಸಿದ್ದು ನಮಗೆಲ್ಲಾ ಪ್ರೇರಣೆ ಒದಗಿಸಿದೆ. ನಮ್ಮ ಸಂಸ್ಥೆಯು ಅಗತ್ಯ ಬಿದ್ದಾಗಲೆಲ್ಲಾ ರಕ್ತದಾನದ ಮೂಲಕ ,ವಿಕಲಚೇತನರಿಗೆ ಸಲಕರಣೆ ವಿತರಣೆ, ರೋಗಿಗಳಿಗೆ ಹಣ್ಣು ಹಂಪಲು ಹಸ್ತಾಂತರ ಸೇರಿದಂತೆ ದೀನ ದಲಿತ ಸೇವೆಯಲ್ಲಿ ನಿರತವಾಗಿದೆ ಎಂದರು.

ಉದ್ಯಮಿ ಎಂ.ಕೆ  ಜಾಹೀರ್ ಅಬ್ಬಾಸ್ ಅವರು ಸಂಸ್ಥೆಯ ರಕ್ತದಾನ ಸಹಿತ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಇದೇ ಸಂದರ್ಭ77ನೇ ಸ್ವಾತಂತ್ರ್ಯ ಆಚರಣೆ, `ಧ್ವಜಾರೋಹಣ ನೆರವೇರಿತು. ಮಾಜಿ ಮೇಯರ್.ಕೆ ಅಶ್ರಫ್, ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ತರ ಶ್ರೇಯೋಭಿವೃದ್ಧಿಯ ಸಂಘದ  ಅಧ್ಯಕ್ಷ  ಬಿ.ಕೆ.ಇಮ್ತಿಯಾಝ್ ,ಪ್ರಮುಖರಾದ ಸುನಿಲ್ ಕುಮಾರ್ ಬಜಾಲ್,ಆಲ್ ಹಕ್ ಫೌಂಡೇಷನ್‍ನ ಬಿ.ಎಸ್ ಇಮ್ತಿಯಾಝ್, ವುಮೆನ್ಸ್ ವಿಂಗ್‍ನ ಆಲಿಶಾ , ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು  ಮತ್ತಿತರರು ಉಪಸ್ಥಿತರಿದ್ದರು.

Join Whatsapp