ಫ್ರಾನ್ಸ್: ಭುಗಿಲೆದ್ದ ಹಿಜಾಬ್ ,ಹಲಾಲ್ ವಿವಾದ

Prasthutha|

ಪ್ಯಾರಿಸ್‌: ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಅನ್ನು ಧರಿಸುವುದಕ್ಕೆ ನಿಷೇಧ ಹೇರುವುದಾಗಿ ಫ್ರಾನ್ಸ್ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯೆಯಾಗಿರುವ ಮೆರಿನ್ ಲೆ ಪೆನ್ ಹೇಳಿ ದ್ದಾರೆ.

- Advertisement -

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಹಿಜಾಬ್ ಮಾತ್ರವಲ್ಲದೆ ಕ್ರಮವಾಗಿ ಮುಸ್ಲಿಮರ ಹಾಗೂ ಯಹೂದಿಗಳ ಸಾಂಪ್ರದಾಯಿಕ ಪ್ರಾಣಿವಧೆಯ ಮಾರ್ಗಗಳಾದ ಹಲಾಲ್‌, ಕೋಶರ್‌ ಮಾಂಸವನ್ನು ನಿಷೇಧಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಇಮಾನುವೆಲ್ ಮ್ಯಾಕ್ರನ್‌ ನೇರ ಪ್ರಸ್ತಾವನೆ ನೀಡಿಲ್ಲ. ಆದರೂ ಶಾಲೆಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ಹಿಜಾಬ್‌ ನಿಷೇಧಿಸುವ ತಮ್ಮ ಸರಕಾರದ ಕಾನೂನು ಮುಂದುವರಿಸಿರುವುದಾಗಿ ಹೇಳಿದ್ದಾರೆ.

- Advertisement -

ಭಾರತದಲ್ಲಿ ಪ್ರತೀ ಚುನಾವಣೆ ವೇಳೆಗಳಲ್ಲಿ ವ್ಯಕ್ತವಾಗುವಂತೆ ರಾಷ್ಟ್ರೀಯವಾದ ಹಾಗೂ ಜಾತ್ಯತೀತತೆ ಅಲ್ಲಿಯ ಚುನಾವಣ ಪ್ರಚಾರಗಳಲ್ಲಿಯೂ ಮೇಳೈಸಿವೆ.ಇದೀಗ ಫ್ರಾನ್ಸ್ ನಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಹೆಚ್ಚಾಗಿದ್ದು, ಮತದಾನದ ಮೊದಲ ಹಂತ ಎ. 10ರಂದು ಮುಗಿದಿದೆ. ಎ. 24ರಂದು 2ನೇ ಹಂತದ ಮತದಾನ ನಡೆಯಲಿದೆ .

2020ರಲ್ಲಿ ಪ್ರವಾದಿಯವರ ಅವಹೇಳನಕಾರಿ ಕಾರ್ಟೂನ್ ನನ್ನು ತರಗತಿಯಲ್ಲಿ ಪ್ರದರ್ಶಿಸಿದ ಶಿಕ್ಷಕನೊಬ್ಬನನ್ನು ದುಷ್ಕರ್ಮಿಗಳು ಶಿರಚ್ಛೇದ ಮಾಡಿದ ಘಟನೆಯ ಬಳಿಕ ಅಲ್ಲಿ ಮುಸ್ಲಿಮರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದು, ಹಾಗಾಗಿ ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಹಿಜಾಬ್‌, ಹಲಾಲ್‌ ವಿವಾದಗಳು ಪ್ರಾರಂಭವಾಗಿದ್ದು, ಹಾಗಾಗಿ ಕೆಲವು ಕಾಯ್ದೆ ಗಳು ಅಲ್ಲಿ ಜಾರಿಯಾಗಿವೆ.

ದಶಕದ ಹಿಂದೆಯೇ ಅಲ್ಲಿ ಬುರ್ಖಾ ಅಥವಾ ಮುಖವನ್ನು ಧಾರ್ಮಿಕ ಕಾರಣಗಳಿಗಾಗಿ ಮರೆ ಮಾಚುವಂಥ ವಸ್ತ್ರಗಳಿಗೆ ನಿಷೇಧ ಹೇರಲಾಗಿದ್ದು, ಇದೇ ಫೆಬ್ರವರಿಯಲ್ಲಿ ಕ್ರೀಡೆಗಳಲ್ಲಿ ಹಿಜಾಬ್‌ ನಿಷೇಧಿಸಲಾಗಿತ್ತು.

ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಭುಗಿಲೆದ್ದಿದ್ದ ಹಿಜಾಬ್‌ ಹಾಗೂ ಹಲಾಲ್‌ ನಿಷೇಧದ ಕೂಗು ಫ್ರಾನ್ಸ್ ನಲ್ಲಿಯೂ ಪ್ರತಿಧ್ವನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇವರಿಬ್ಬರ ಈ ನಡೆಗೆ ಶೇ. 9ರಷ್ಟಿರುವ ಮುಸ್ಲಿಂ ಸಮುದಾಯ ಚುನಾವಣೆಯಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದು ಅತ್ಯಂತ ಕುತೂಹಲಕಾರಿ ವಿಚಾರವಾಗಿದೆ.

Join Whatsapp