‘ನನ್ನ ಹೆಸರು ಮರಿಯಮ್, ಹಾಗೆಯೇ ಕರೆಯಿರಿ’ | ಇಸ್ಲಾಂ ವಿರೋಧಿ ಫ್ರಾನ್ಸ್ ಅಧ್ಯಕ್ಷರೆದುರಲ್ಲೇ ತಾನು ಮುಸ್ಲಿಮಳಾದ ಬಗ್ಗೆ ಬಹಿರಂಗಪಡಿಸಿದ ಫ್ರೆಂಚ್ ಅಪಹೃತೆ !

Prasthutha: October 13, 2020

ಪ್ಯಾರಿಸ್ : “ಇಸ್ಲಾಂ ಧರ್ಮವು ಅತ್ಯಂತ ಬಿಕ್ಕಟ್ಟಿನಲ್ಲಿರುವ ಧರ್ಮವಾಗಿದೆ. ಮುಸ್ಲಿಮರು ಅದರಿಂದ ಹಿಂದೆ ಸರಿಯಬೇಕು ಮತ್ತು ದೇಶದ ಪ್ರಗತಿಯಲ್ಲಿ ಭಾಗವಹಿಸಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್ ನ ಬಲಪಂಥೀಯ ಅಧ್ಯಕ್ಷ ಇಮಾನ್ವೆಲ್ ಮ್ಯಾಕ್ರೋನ್ ಅವರಿಗೆ ಜೀವನದಲ್ಲಿ ಮರೆಯಲಾಗದ ಮುಖಭಂಗವಾಗಿದೆ.  4 ವರ್ಷಗಳ ಹಿಂದೆ ಮಾಲಿಯಲ್ಲಿ ಪ್ರತ್ಯೇಕತಾವಾದಿಗಳಿಂದ ಅಪಹೃತಗೊಂಡಿದ್ದ 75ರ ಹರೆಯದ ಮಾನವ ಹಕ್ಕುಗಳ ಕಾರ್ಯಕರ್ತೆ ಸೋಫಿ ಪೆಟ್ರಾನಿನ್ ಅಪಹೃತರಿಂದ ಬಿಡುಗಡೆಗೊಂದು ಅಕ್ಟೋಬರ್ 9 ರಂದು ಫ್ರಾನ್ಸಿಗೆ ಮರಳುತ್ತಿದ್ದರು. ಈ ವೇಳೆ  ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅಧ್ಯಕ್ಷ ಮ್ಯಾಕ್ರೋನ್ ತನ್ನ ತಂಡದೊಂದಿಗೆ ಹಾಜರಿದ್ದರು. ವಿಮಾನದಿಂದಿಳಿಯುವಾಗ ತಲೆಗೆ ಸ್ಕಾರ್ಫ್ ಹಾಕಿ, ಸಂಪೂರ್ಣವಾಗಿ ಮೈ ಮುಚ್ಚಿದ್ದ ಸೋಫಿ ಅವರು ಮ್ಯಾಕ್ರೋನ್ ರ ಕೈಕುಲುಕುತ್ತಾ, “ನನ್ನ ಹೆಸರು ಮರಿಯಮ್, ಹಾಗೆಯೇ ಕರೆಯಿರಿ” ಎಂದು ಹೇಳಿ ಅಧ್ಯಕ್ಷರನ್ನೇ ಅಚ್ಚರಿಗೆ ಕೆಡವಿದ್ದಾರೆ. ಮರಿಯಮ್ ಅವರ ಈ ನಡೆ ಫ್ರಾನ್ಸಿನ ತೀವ್ರಗಾಮಿ ಬಲಪಂಥೀಯರನ್ನು ಕೆರಳಿಸಿದೆ ಎನ್ನಲಾಗಿದೆ.

ಫ್ರಾನ್ಸಿನಲ್ಲಿ ಮುಸ್ಲಿಮರನ್ನು ಏಕಾಂತಗೊಳಿಸಬೇಕೆಂಬ ನಿಟ್ಟಿನಲ್ಲಿ ಹಲವು ಕರಾಳ ಕಾನೂನುಗಳನ್ನು (Islamic Isolationism) ಜಾರಿಗೊಳಿಸಲು ಮುಂದಾಗಿರುವ ಕಟ್ಟರ್ ಬಲಪಂಥೀಯವಾದಿ ಮ್ಯಾಕ್ರೋನ್ ಗೆ ಅಪಹೃತರಿಂದ ಬಿಡುಗಡೆಗೊಂಡ ಮರಿಯಮ್ ಅವರ ಹೇಳಿಕೆಯಿಂದ ಒಂದು ಕ್ಷಣ ಮುಜುಗರಗೊಂಡರೂ ನಂತರ ಸಾವರಿಸಿಕೊಂಡಿದ್ದಾರೆ.  ಮರಿಯಮ್ ಅವರು ನಂತರ ತನ್ನ ಕುಟುಂಬದವರೊಂದಿಗೆ ಸಂತಸ ಹಂಚಿಕೊಳ್ಳುವಾಗಲೂ  ಮ್ಯಾಕ್ರೋನ್ ಕುಟುಂಬದ  ಬಳಿಯಲ್ಲೇ ನಿಂತಿರುವುದನ್ನು ಟಿವಿಗಳು ತೋರಿಸಿದ್ದವು.

ಬಂಧನದಲ್ಲಿದ್ದ ಮರಿಯಮ್ ಅವರು ತನ್ನ ಅನುಭವಗಳನ್ನು ವಿವರಿಸಲು ಫ್ರೆಂಚ್ ಅಧಿಕಾರಿಗಳು ಸುದ್ದಿಗೋಷ್ಟಿಯನ್ನೂ ಏರ್ಪಡಿಸಿದ್ದರು. ಆದರೆ ಮರಿಯಮ್ ಅವರ ಹೇಳಿಕೆಯಿಂದ ಮುಜುಗರಕ್ಕೊಳಗಾದ ಅಧ್ಯಕ್ಷ ಮ್ಯಾಕ್ರೋನ್ ಮತ್ತವರ ತಂಡ ನಿಗದಿಪಡಿಸಿದ್ದ ಸ್ವಾಗತ ಮತ್ತು ಪತ್ರಿಕಾಗೋಷ್ಠಿಗಳನ್ನು ಕೈಬಿಟ್ಟು ಬೇಗನೇ ಅಲ್ಲಿಂದ ಕಾಲ್ಕಿತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!