ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರು ಮೃತ್ಯು

Prasthutha|

ಬೆಳಗಾವಿ: ಕಿತವಾಡ ಫಾಲ್ಸ್ ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

- Advertisement -


ಬೆಳಗಾವಿ ಉಜ್ವಲ ನಗರದ ಆಸಿಯಾ ಮುಝಾವರ (17), ತಸ್ಮಿಯಾ (20 ), ಕುದ್ಶೀಯಾ ಹಾಸಿಂ ಪಟೇಲ್ (20 ) ಹಾಗೂ ರುಕ್ತಶೀರ್ ಬಿಸ್ತಿ (20) ಎಂಬವರಾಗಿದ್ದಾರೆ ಮೃತರು. ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


ಬಾಶೆಬನ್ ಹೈ ಸ್ಕೂಲ್ ನ 40 ಯುವತಿಯರ ತಂಡ ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ ಹೋಗಿತ್ತು. ಫಾಲ್ಸ್ ವೀಕ್ಷಣೆ ವೇಳೆ ಸೆಲ್ಫಿ ತೆಗೆದುಕೊಳ್ಳಲುವ ವೇಳೆ ಐವರು ಯುವತಿಯರು ಕಾಲು ಜಾರಿ ಫಾಲ್ಸ್‌ಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ

Join Whatsapp