ನಾಲ್ಕು ಬಾರಿ ‘ಮಿಸ್ಟರ್ ಇಂಡಿಯಾ’ ದೇಹದಾರ್ಢ್ಯ ಪಟು ಆಶಿಶ್ ನಿಧನ

Prasthutha|

ನವದೆಹಲಿ: ನಾಲ್ಕು ಬಾರಿ ‘ಮಿಸ್ಟರ್ ಇಂಡಿಯಾ’ ದೇಹದಾರ್ಢ್ಯ ಪ್ರಶಸ್ತಿಯನ್ನು ಗೆದ್ದಿದ್ದ ದೇಹದಾರ್ಢ್ಯ ಪಟು ಆಶಿಶ್ ಸಖರ್ಕರ್ (43) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

- Advertisement -

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.


80 ಕೆ.ಜಿ. ವಿಭಾಗದಲ್ಲಿ ಬಾಡಿ ಬಿಲ್ಡರ್ ಆಗಿದ್ದ ಸಖರ್ಕರ್ ಅವರು ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಹಾರಾಷ್ಟ್ರ ಸರ್ಕಾರದ ‘ಶಿವ ಛತ್ರಪತಿ ಪ್ರಶಸ್ತಿ’ಯನ್ನು ಪಡೆದಿದ್ದಾರೆ.



Join Whatsapp