ಮ್ಯಾನ್ಮಾರಿನಲ್ಲಿ ನಾಲ್ವರು ರಾಜಕಾರಣಿಗಳಿಗೆ ಗಲ್ಲುಶಿಕ್ಷೆ!

Prasthutha|

ಬ್ಯಾಂಕಾಕ್: 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ಮಾರ್ ಸರಕಾರ ಅಚ್ಚರಿಯ ತೀರ್ಪೊಂದನ್ನು ಪ್ರಕಟಿಸಿದೆ. ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಮಾಜಿ ಸಂಸದ ಮತ್ತು ಇತರ ಮೂವರು ರಾಜಕೀಯ ನಾಯಕರಿಗೆ ಗಲ್ಲು ಶಿಕ್ಷೆ ವಿಧಿಸಿದೆ.

- Advertisement -

ಸಾಮಾಜಿಕ ಕಾರ್ಯಕರ್ತ ಕೋ ಜಿಮ್ಮಿ ಮತ್ತು ಶಾಸಕಿ ಫಿಯೋ ಝಿಯಾ ಥಾವ್ ಸೇರಿದಂತೆ ನಾಲ್ವರ ಮೇಲೆ ಭಯೋತ್ಪಾದಕ ಕೃತ್ಯಗಳು ಎಸಗಿದ ಆರೋಪವಿದೆ. ಈ ನಾಲ್ವರು ರಾಜಕೀಯ ನಾಯಕರಿಗೆ ಕ್ಷಮಾಪಣೆ ನೀಡಬೇಕೆಂಬ ಜಾಗತಿಕ ಮನವಿಯ ಹೊರತಾಗಿಯೂ ಸೇನಾಡಳಿತ ಈ ಕ್ರಮ ಕೈಗೊಂಡಿದೆ.

ಕಳೆದ ವರ್ಷ ಸೇನೆಯು ದೇಶದ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯಗಳನ್ನು ಪ್ರೇರೇಪಿಸಿದ ಆರೋಪ ಸಂಬಂಧ ಕಾನೂನಿಗೆ ಅನುಗುಣವಾಗಿ ನಾಲ್ವರನ್ನು ಗಲ್ಲಿಗೇರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ‘ಮಿರರ್ ಡೈಲಿ’ ಪತ್ರಿಕೆ ವರದಿ ಮಾಡಿದೆ



Join Whatsapp