ಕುಖ್ಯಾತ ನಾಲ್ವರು ಕಳ್ಳರು ಬಂಧನ: 98 ಲಕ್ಷ ಮೌಲ್ಯದ ಚಿನ್ನ ಜಪ್ತಿ

Prasthutha|

ಬೆಂಗಳೂರು: ನಗರ ಸೇರಿ ಹಾಸನ,ಮೈಸೂರು ಇನ್ನಿತರ ಕಡೆಗಳಲ್ಲಿ ಮನೆಗಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು 98 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ರಾಜಸ್ತಾನ ಮೂಲದ ರಂಜಿತ್ ಸಿಂಗ್(34) ಸೈಯದ್ ತಬ್ರೇಜ್ ಪಾಷಾ(31)ಆಬಿದ್ ಆಜಂ(30)ಹಾಗೂ ಮಹಮ್ಮದ್ ಸದ್ದಾಂ(36) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದರು.

ಬಂಧಿತ ಆರೋಪಿಗಳಿಂದ 98 ಲಕ್ಷ ಮೌಲ್ಯದ 1ಕೆಜಿ 980ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು 12 ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ‌ಹೇಳಿದರು.
ಆರೋಪಿಗಳಲ್ಲಿ ರಾಜಸ್ತಾನ ಮೂಲದ ರಂಜಿತ್ ಸಿಂಗ್ ಕಾಮಾಕ್ಷಿಪಾಳ್ಯದ ತಾನು ಚಿನ್ನದಂಗಡಿಯಲ್ಲಿ ‌ಕೆಲಸ ಮಾಡುತ್ತಿದ್ದ ಅಂಗಡಿಯ ಕಪಾಟಿನ ಕೀಯನ್ನು ಮಾಲೀಕರಿಗೆ ಗೊತ್ತಾಗದಂತೆ ನಕಲಿ ಕೀ ಮಾಡಿಸಿಕೊಂಡು ಕಳೆದ ಐದು ವರ್ಷಗಳಲ್ಲಿ ಮಾಲೀಕರ ಗಮನಕ್ಕೆ ಬಾರದಂತೆ ಕಳವು ಮಾಡಿದ್ದ.

- Advertisement -

ಕಳ್ಳತನ ಮಾಡುತ್ತಿರುವುದು ಇತ್ತೀಚೆಗೆ ಮಾಲೀಕರ ಗಮನಕ್ಕೆ ಬಂದಿರುವುದು ಗೊತ್ತಾಗಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತನಿಂದ 55 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಇನ್ನೂ ಮೂವರು ಆರೋಪಿಗಳಾದ ಸೈಯದ್ ತಬ್ರೇಜ್ ಪಾಷಾ, ಆಬಿದ್ ಆಜಂ, ಮಹಮ್ಮದ್ ಸದ್ದಾಂ ಎಂಬವರಿಂದ 40 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Join Whatsapp