ಕಂದಕಕ್ಕೆ ಉರುಳಿ ಬಿದ್ದ ಟ್ರಕ್: ಸ್ಥಳದಲ್ಲೇ ನಾಲ್ವರು ಮೃತ್ಯು

Prasthutha|

ಜಮ್ಮು: ಟ್ರಕ್ ಕಂದಕಕ್ಕೆ ಉರುಳಿ ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

- Advertisement -


ಇಂದು (ಶುಕ್ರವಾರ) ಶ್ರೀನಗರದಿಂದ ರಾಜಸ್ಥಾನಕ್ಕೆ ಹೋಗುತ್ತಿದ್ದ ಟ್ರಕ್ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಜರ್ ಕೋಟ್ಲಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಭೀಕರ ಅಪಘಾತ ಸಂಭವಿಸಿರುವುದರಿಂದ ಟ್ರಕ್ ಸಂಪೂರ್ಣವಾಗಿ ನಜ್ಜು – ಗುಜ್ಜಾಗಿದೆ.



Join Whatsapp