ಹೊಸಕೋಟೆಯಲ್ಲಿ ಅಪಾರ್ಟ್ ಮೆಂಟ್ ಗೋಡೆ ಕುಸಿದು ನಾಲ್ವರು ಸಾವು

Prasthutha|

ದೇವನಹಳ್ಳಿ: ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ನಡೆದಿದೆ.

- Advertisement -

ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಮೃತ ದುರ್ದೈವಿಗಳಾಗಿದ್ದಾರೆ.

ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ನಿರ್ಮಾಣದ ಹಂತದಲ್ಲಿದ್ದ ಬಹು ಮಹಡಿ ಕಟ್ಟಡದಲ್ಲಿ  ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ಶೆಡ್ ಮೇಲೆ ಪಕ್ಕದ ಹುಡಾನ್ ಕಂಪನಿಯ ವೇರ್ ಹೌಸ್ ನ ಗೋಡೆ ಮಳೆಯಿಂದಾಗಿ ಕುಸಿದಿದ್ದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರು ಉತ್ತರ ಭಾರತೀಯ ಮೂಲದ ನಿವಾಸಿಗಳಾಗಿದ್ದು, ಒಟ್ಟು 8 ಕಾರ್ಮಿಕರು ಶೆಡ್ ನಲ್ಲಿ ಮಲಗಿದ್ದರು. ಉಳಿದ ನಾಲ್ವರು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದು, ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಸ್ಥಳಕ್ಕೆ ಹೊಸಕೋಟೆ ಡಿವೈಎಸ್ ಪಿ ಉಮಾಶಂಕರ್ ಹಾಗೂ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Join Whatsapp