ತಾಯಿ ಮಲಗಿದ್ದಾಳೆಂದು ಭಾವಿಸಿ ಮೃತದೇಹದ ಜೊತೆ ನಾಲ್ಕು ದಿನ ಕಳೆದ ಬಾಲಕ !

Prasthutha|

ತಿರುಪತಿ: ತಾಯಿ ಮಲಗಿದ್ದಾಳೆ ಎಂದು ಭಾವಿಸಿ ಬಾಲಕನೊಬ್ಬ ತಾಯಿಯ ಮೃತದೇಹದ ಜೊತೆ ನಾಲ್ಕು ದಿನಗಳ ಕಾಲ ಮನೆಯಲ್ಲಿ ಕಳೆದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.

- Advertisement -

ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ರಾಜಲಕ್ಷ್ಮಿ (41) ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 5ನೇ ತರಗತಿ ವಿದ್ಯಾರ್ಥಿ, ಪುತ್ರ ಶ್ಯಾಮ್ ಕಿಶೋರ್, ತಾಯಿ ಮಲಗಿದ್ದಾರೆಂದು ಭಾವಿಸಿ  ಅಡುಗೆ ಕೋಣೆಯಲ್ಲಿ ಡಬ್ಬದಲ್ಲಿದ್ದ ಆಹಾರ ಸೇವಿಸಿ, ಸಮವಸ್ತ್ರ ಧರಿಸಿ ಶಾಲೆಗೆ ತೆರಳುತ್ತಿದ್ದ.

4 ದಿನಗಳ ಬಳಿಕ ತಾಯಿಯ ದೇಹದಿಂದ ದುರ್ವಾಸನೆ ಬರಲು ಆರಂಭಿಸಿದಾಗ ಬಾಲಕ ಶ್ಯಾಮ್ ಕಿಶೋರ್ ತನ್ನ ಚಿಕ್ಕಪ್ಪ ದುರ್ಗ ಪ್ರಸಾದ್’ಗೆ ಕರೆ ಮಾಡಿ ತಿಳಿಸಿದ್ದಾನೆ. ದುರ್ಗಾಪ್ರಸಾದ್ ಮನೆಗೆ ಬಂದು ನೋಡಿದಾಗ ತಂಗಿ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.  ಪೊಲೀಸರು ರಾಜಲಕ್ಷ್ಮಿ ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

ಪತಿಯೊಂದಿಗಿನ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ರಾಜಲಕ್ಷ್ಮಿ, ಕಳೆದ ಎರಡು ವರ್ಷಗಳಿಂದ ವಿದ್ಯಾನಗರ ಪ್ರದೇಶದ ಬಾಡಿಗೆ ಫ್ಲಾಟ್’ವೊಂದರಲ್ಲಿ ಮಗ ಶ್ಯಾಮ್ ಕಿಶೋರ್ನೊಂದಿಗೆ ವಾಸಿಸುತ್ತಿದ್ದರು.

 ಕರ್ನಾಟಕದ ವಿಶ್ವವಿದ್ಯಾಲಯವೊಂದರಲ್ಲಿ ಇತ್ತೀಚೆಗಷ್ಟೇ ಪಿಎಚ್ ಡಿ ಮುಗಿಸಿದ್ದ ರಾಜಲಕ್ಷ್ಮಿ, ಪದವಿ ಪಡೆಯಲು ಮಾರ್ಚ್ 9 ರಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದರು.  ಚಿತ್ತೂರಿನಲ್ಲಿರುವ ತನ್ನ ಸಹೋದರ ದುರ್ಗಾ ಪ್ರಸಾದ್’ಗೆ ತನ್ನ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ್ದಳು. ಕೆಲ ದಿನಗಳಿಂದ ತಾನು ತಲೆನೋವಿನಿಂದ ಬಳಲುತ್ತಿರುವುದಾಗಿ ಇದೇ ವೇಳೆ ಸಹೋದರನಿಗೆ ತಿಳಿಸಿದ್ದಳು.



Join Whatsapp