ಭದ್ರತಾ ನಿಯಮ ಉಲ್ಲಂಘಿಸಿ ವಿರಾಟ್ ಕೊಹ್ಲಿ ಕಡೆಗೆ ನುಗ್ಗಿದ ನಾಲ್ವರ ಬಂಧನ

Prasthutha|

ಬೆಂಗಳೂರು: ಭಾರತ-ಶ್ರೀಲಂಕಾ 2ನೇ ಟೆಸ್ಟ್ ಕ್ರಿಕೆಟ್ ಆಟದ ವೇಳೆ ನಿಯಮ ಉಲ್ಲಂಘಿಸಿ ವಿರಾಟ್ ಕೊಹ್ಲಿ ಕಡೆಗೆ ನುಗ್ಗಿ, ಸೆಲ್ಫಿಗಾಗಿ ಮುಗಿ ಬಿದ್ದು, ಅವಾಂತರ ಸೃಷ್ಟಿಸಿದ ಆರೋಪದಲ್ಲಿ ನಾಲ್ವರು ಯುವಕರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

- Advertisement -

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ 10.15ರ ವೇಳೆ ಪಂದ್ಯದ ಕೊನೆಯ  ಓವರ್ ವೇಳೆ ಯುವಕರು ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಅನುಚಿತ ವರ್ತನೆ ತೋರಿದ ಕಲಬುರಗಿಯ ಓರ್ವ ಯುವಕ ಹಾಗೂ ಬೆಂಗಳೂರಿನ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಆರೋಪಿಗಳ ವಿರುದ್ಧ ಅತಿಕ್ರಮ ಪ್ರವೇಶ, ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

Join Whatsapp