ಬ್ಯಾಂಕ್ ದರೋಡೆಗೆ ಯತ್ನಿಸಿದ ನಾಲ್ವರ ಬಂಧನ !

Prasthutha|

ಚಾಮರಾಜನಗರ: ಬ್ಯಾಂಕ್  ದರೋಡೆಗೆ ಯತ್ನಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಅಭಿಷೇಕ್(26), ಶ್ರೀನಿವಾಸ್(27), ರಾಚಪ್ಪಾಜಿನಗರದ ಮುತ್ತುಸ್ವಾಮಿ(26), ಮಲ್ಲೇಶ್(26) ಬಂಧಿತರು. ಬಂಧಿತರಿಂದ ಬ್ಯಾಂಕ್ ಗಳ ಕಂಪ್ಯೂಟರ್ ಮಾನಿಟರ್, ಸಿಸಿಟಿವಿ ಡಿವಿಆರ್, ಆಂಪ್ಲಿಫೈರ್, ಎರಡು ಮೋಟಾರ್ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

- Advertisement -

ಬ್ಯಾಂಕ್ ದರೋಡೆಗೆ ಆರೋಪಿಗಳು ಕೊಳ್ಳೇಗಾಲ ಬೆಂಗಳೂರು ಹೆದ್ದಾರಿಯಲ್ಲಿ ಹೊಂಚು ಹಾಕುತ್ತಿದ್ದರು. ಇದೀಗ ಪೊಲೀಸ್ ಅಧಿಕಾರಿಗಳು ಸೇರಿದಂತೆ 17 ಮಂದಿ ಪೊಲೀಸರ ತಂಡದಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.

- Advertisement -