ಇಹ್ಸಾನ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಶಂಕುಸ್ಥಾಪನೆ

Prasthutha|

ಮಂಗಳೂರು: ಇಹ್ಸಾನ್ ವೆಲ್ಫೇರ್ ಟ್ರಸ್ಟ್ (ರಿ) ಪಂಜಿಮೊಗರು ಇದರ ವತಿಯಿಂದ ಬಡ ಕುಟುಂಬಕ್ಕೆ ಸುಕೂನ್ ಯೋಜನೆಯ ಅಂಗವಾಗಿ ಮನೆ ನಿರ್ಮಾಣ ಕಾರ್ಯದ ಶಂಕು ಸ್ಥಾಪನೆ ಕಾರ್ಯಕ್ರಮವು ಆದಿತ್ಯವಾರ ಬೆಳಿಗ್ಗೆ ಬಹು ಇರ್ಷಾದ್ ದಾರಿಮಿ ಹಾಗೂ ಕೂಳೂರು ಮೂಹಿಯುದ್ದಿನ್ ಜುಮ್ಮಾ ಮಸ್ಜಿದ್ ಧರ್ಮ ಗುರುಗಳಾದ ಇಕ್ರಮುಲ್ಲಾ ಸಖಾಫಿ ಹಾಗೂ ಟ್ರಸ್ಟ್ ಅಧ್ಯಕ್ಷರು ನಿಸಾರ್ ಇವರ ನೇತೃತ್ವದಲ್ಲಿ ನಡೆಯಿತು.

- Advertisement -

ಬಶೀರ್ ಮದನಿ ಮತ್ತು ಮಸೀದಿಯ ಅಧ್ಯಕ್ಷರುಗಳು ಹಾಗೂ ಊರಿನ ಉಲಮ ಉಮಾರಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.



Join Whatsapp