ಮಾಜಿ ವಿಶ್ವ ನಂ.1 ಆಟಗಾರ್ತಿ ಗಾರ್ಬಿನ್‌ ಮುಗುರುಜಾ ಟೆನಿಸ್​ಗೆ ವಿದಾಯ

Prasthutha|

ಮ್ಯಾಡ್ರಿಡ್: ಸ್ಪೇನಿನ ಖ್ಯಾತ ಟೆನಿಸ್​ ಆಟಗಾರ್ತಿ, ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್, ಮಾಜಿ ವಿಶ್ವ ನಂ.1 ಆಟಗಾರ್ತಿ ಗಾರ್ಬಿನ್‌ ಮುಗುರುಜಾ ಟೆನಿಸ್​ಗೆ ವಿದಾಯ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿ ನಡೆಸಿ ಅವರಯ ತಮ್ಮ ವಿದಾಯವನ್ನು ಪ್ರಕಟಿಸಿದ್ದಾರೆ. ಇದು ನಿವೃತ್ತಿ ಹೊಂದುವ ಸಮಯ ಮತ್ತು ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆಯುವ ಸಮಯ ಎಂದು ಭಾವಿಸುವೆ ಎಂದು ಹೇಳಿದ್ದಾರೆ.

ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವಿಲಿಯಮ್ಸ್ ಸಹೋದರಿಯರನ್ನು ಸೋಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ 36 ವರ್ಷದ ಗಾರ್ಬಿನ್‌ ಮುಗುರುಜಾ ಅವರದ್ದಾಗಿದೆ.

Join Whatsapp