ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರ ಉಮೇದುವಾರಿಕೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಚೆಲ್ ಅನುಮೋದಿಸಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿಮ್ಮನ್ನು ಅಧ್ಯಕ್ಷೀಯ ಸ್ಥಾನಕ್ಕೆ ಅನುಮೋದಿಸಲು ನನಗೆ ಮತ್ತು ಪತ್ನಿ ಮಿಚೆಲ್ಗೆ ಹೆಮ್ಮೆಯಾಗುತ್ತಿದೆ.ಉನ್ನತ ಹುದ್ದೆಗೆ ನೀವು ತಲುಪಲು ನಮ್ಮಿಂದ ಸಾಧ್ಯವಿರುವ ನೆರವನ್ನು ನೀಡುತ್ತೇವೆ ಎಂದು ಕಮಲಾ ಹ್ಯಾರಿಸ್‌ಗೆ ಕರೆ ಮಾಡಿ ಬರಾಕ್ ಒಬಾಮಾ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
2016ರಲ್ಲಿ ಹಿಲರಿ ಕ್ಲಿಂಟನ್ ಮತ್ತು 2020ರಲ್ಲಿ ಜೋ ಬೈಡನ್ ಪರ ಒಬಾಮಾ ದಂಪತಿ ಪ್ರಚಾರ ನಡೆಸಿದ್ದರು. ಈ ಬಾರಿ ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸುವ ಸಾಧ್ಯತೆ ನಿಶ್ಚಲವಾಗಿದೆ ಎನ್ನಲಾಗಿದೆ.