ಗಾಝಾದಲ್ಲಿ ಇಸ್ರೇಲ್‌ ನಡೆಸುವ ದಾಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ

Prasthutha|

ವಾಷಿಂಗ್ಟನ್:‌ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಗಾಝಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ಕ್ರೂರ ದಾಳಿಯ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷರೇ ಅಸಮ್ಮತಿ ಸೂಚಿಸಿದ ಮಹತ್ತರ ಬೆಳವಣಿಗೆ ನಡೆದಿದೆ.  ಗಾಝಾದಲ್ಲಿ ಈ ಪರಿಯಾಗಿ ದಾಳಿ ಮತ್ತು ಗಾಝಾ ನಗರಕ್ಕೆ ನೀರು, ಆಹಾರ ಮುಂತಾದ ಮೂಲಭೂತ ಸೌಕರ್ಯಗಳ ಪೂರೈಕೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದು ಫೆಲೆಸ್ತೀನೀಯರ ಧೋರಣೆಯನ್ನು ತಲೆಮಾರುಗಳ ಕಾಲ ಇನ್ನಷ್ಟು ಕಠಿಣವಾಗಿಸಬಹುದು ಮತ್ತು ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಬೆಂಬಲ ಕಡಿಮೆಗೊಳಿಸಬಹುದು. ಮನುಕುಲದ ಮೇಲಿನ ಪರಿಣಾಮಗಳನ್ನು ನಿರ್ಲಕ್ಷಿಸುವ ಮಿಲಿಟರಿ ತಂತ್ರಗಾರಿಕೆಯು ಅಂತಿಮವಾಗಿ ಇಸ್ರೇಲ್‌ಗೆ ತಿರುಗುಬಾಣವಾಗಬಹುದು ಎಂದು ಎಂದು ಬರಾಕ್‌ ಒಬಾಮ ಹೇಳಿದ್ದಾರೆ.  ಅಮೆರಿಕದ ಮಾಜಿ ಅಧ್ಯಕ್ಷರ ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದಿದೆ.

- Advertisement -

ಗಾಝಾದ ಜನರಿಗೆ ಆಹಾರ, ನೀರು, ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲು ಇಸ್ರೇಲ್‌ ಸರಕಾರದ ನಿರ್ಧಾರವು ಅಲ್ಲಿನ ಬಿಕ್ಕಟ್ಟನ್ನು ತೀವ್ರಗೊಳಿಸಬಹುದು ಮತ್ತು ಈ ಪ್ರಾಂತ್ಯದಲ್ಲಿ ಶಾಂತಿ ಸ್ಥಿರತೆ ಕಾಪಾಡುವ ಯತ್ನಕ್ಕೆ ತೊಡಕಾಗಬಹುದು ಎಂದೂ ಒಬಾಮ ಹೇಳಿದ್ದಾರೆ.

ಗಾಜಾ ಸಾವಿನ ಸಂಖ್ಯೆ 5,500ಕ್ಕೆ ಏರಿದ್ದು, ಅವರಲ್ಲಿ ಅರ್ಧದಷ್ಟು ಮಕ್ಕಳಾಗಿದ್ದಾರೆ. ಇಸ್ರೇಲಿನ ಪೈಶಾಚಿಕ ದಾಳಿಯ ಬಗ್ಗೆ ಇಸ್ರೇಲಿಗೆ ಬೆಂಬಿಸಿ ಅಮೆರಿಕ ನೆರವು ನೀಡುತ್ತಿರುವುದೆರ ಮಧ್ಯೆ ಅದೇ ದೇಶದ ಮಾಜಿ ಅಧ್ಯಕ್ಷರ ಪ್ರಸ್ತುತ ಹೇಳಿಕೆ ಗಮನಾರ್ಹವಾಗಿದೆ. ತಾವು ಅಧ್ಯಕ್ಷರಾಗಿದ್ದಾಗ ಫೆಲೆಸ್ತೀನ್‌ ವಿರುದ್ಧದ ಸಂಘರ್ಷದಲ್ಲಿ ಆತ್ಮರಕ್ಷಣೆಗೆ ಇಸ್ರೇಲ್‌ಗೆ ಇರುವ ಹಕ್ಕನ್ನು ಒಬಾಮ ಆರಂಭದಲ್ಲಿ ಸಮರ್ಥಿಸಿದ್ದರಾದರೂ ಇಸ್ರೇಲಿ ವಾಯುದಾಳಿಗಳಿಂದಾಗಿ ಫೆಲೆಸ್ತೀನ್‌ನಲ್ಲಿ ಸಾವು ನೋವುಗಳು ಅಧಿಕವಾಗುತ್ತಿದ್ದಂತೆಯೇ ಇಸ್ರೇಲ್‌ ದಾಳಿ ಕಡಿಮೆಗೊಳಿಸುವಂತೆ ಕರೆ ನೀಡುತ್ತಿದ್ದರು ಎನ್ನಲಾಗಿದೆ.

Join Whatsapp