ಕೇಂದ್ರದ ಮಾಜಿ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ

Prasthutha|

ನವದೆಹಲಿ: ಕೇಂದ್ರದ ಮಾಜಿ ಸಚಿವ ಚೌಧರಿ ಬಿರೇಂದರ್ ಸಿಂಗ್ ತಮ್ಮ ಪತ್ನಿ ಪ್ರೇಮಲತಾ ಸಿಂಗ್‌ರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement -

ಮೂಲ ಕಾಂಗ್ರೆಸಿಗರಾಗಿದ್ದ ಬಿರೇಂದರ್ ಸಿಂಗ್ ಬಿಜೆಪಿ ಸೇರಿ ಮೊದಲ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಪ್ರೇಮಲತಾ ಸಿಂಗ್ ಹರಿಯಾಣದ ಮಾಜಿ (ಬಿಜೆಪಿ) ಶಾಸಕಿ.

ಇತ್ತೀಚೆಗಷ್ಟೇ ಬಿರೇಂದರ್ ಸಿಂಗ್ ಪುತ್ರ ಹಾಗೂ ಬಿಜೆಪಿಯ ಮಾಜಿ ನಾಯಕ ಬ್ರಿಜೇಂದ್ರ ಸಿಂಗ್ ಕಾಂಗ್ರೆಸ್ ಸೇರಿದ್ದರು.

- Advertisement -

ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಬಿರೇಂದರ್ ಸಿಂಗ್ 10 ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದರು. ಮಾರ್ಚ್ 10 ರಂದು ಅವರ ಮಗ ಕಾಂಗ್ರೆಸ್ ಸೇರಿದದ್ದು, ಬಿರೇಂದರ್ ಸಿಂಗ್ ಕೂಡ ಕಾಂಗ್ರೆಸ್‌ಗೆ ಮರಳಿದ್ದಾರೆ



Join Whatsapp