ರಾಜಸ್ಥಾನ ಮಾಜಿ ಸಿಎಂ ಗೆಹಲೋತ್ ಗೆ ಕೋವಿಡ್, ಎಚ್ 1 ಎನ್1 ಜ್ವರ ದೃಢ

Prasthutha|

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ಕೋವಿಡ್-19 ಹಾಗೂ ಎಚ್1 ಎನ್1 ಜ್ವರ ಧೃಡಪಟ್ಟಿದೆ.

- Advertisement -


ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೆಹಲೋತ್, ಬದಲಾಗುತ್ತಿರುವ ಹವಮಾನ ವೈಪರೀತ್ಯದಿಂದಾಗಿ ಜನರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದ್ದಾರೆ.


‘ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ. ಶುಕ್ರವಾರ( ಫೆ.2) ರಂದು ವೈದ್ಯರ ಸಲಹೆಯಂತೆ ಕೋವಿಡ್–19 ಪರೀಕ್ಷೆ ಮತ್ತು ಇತರೆ ರಕ್ತ ಪರೀಕ್ಷೆ ಮಾಡಿಸಿಕೊಂಡ ಬಳಿಕ ಕೋವಿಡ್ ಹಾಗೂ ಎಚ್1ಎನ್1 ಜ್ವರ ಧೃಡಪಟ್ಟಿದೆ. ಮುಂದಿನ ಒಂದು ವಾರದವರೆಗೂ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಗೆಹಲೋತ್ ತಿಳಿಸಿದ್ದಾರೆ.



Join Whatsapp