4 ವರ್ಷಗಳ ನಂತರ  ವಾಪಸ್ ಪಾಕಿಸ್ತಾನಕ್ಕೆ ತಲುಪಲಿರುವ ಮಾಜಿ ಪ್ರಧಾನಿ ನವಾಝ್ ಷರೀಫ್

Prasthutha|

ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಲಂಡನ್​ನಿಂದ ವಾಪಸಾಗುತ್ತಿದ್ದಾರೆ. 4 ವರ್ಷಗಳ ಬಳಿಕ ಇಂದು ತಾಯಿನಾಡನ್ನು ತಲುಪುತ್ತಿದ್ದಾರೆ. ಮಧ್ಯಹ್ನ 12.40ಕ್ಕೆ ಇಸ್ಲಾಮಾಬಾದ್ ಗೆ ತಲುಪಿ ಸುಮಾರು ಎರಡು ಗಂಟೆಗಳ ಕಾಲ ವಿಶ್ರಾಂತಿ ಪಡೆದು ನಂತರ ಲಾಹೋರ್ ತಲುಪುತ್ತಾರೆ. ಲಾಹೋರ್‌ನ ಮಿನಾರ್-ಎ-ಪಾಕಿಸ್ತಾನದಲ್ಲಿ ದೊಡ್ಡ ರ್ಯಾಲಿಯನ್ನು ಆಯೋಜಿಸಲಾಗಿದ್ದು, ನವಾಝ್ ಷರೀಫ್ ಕೂಡ ಭಾಷಣ ಮಾಡಲಿದ್ದಾರೆ. ಬೃಹತ್ ಸಮಾವೇಶಕ್ಕೆ ಅವರ ಪಕ್ಷ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

- Advertisement -

2019 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ನವಾಝ್ ಷರೀಫ್ ಪಾಕಿಸ್ತಾನವನ್ನು ತೊರೆದಿದ್ದರು. ಈಗ ಸುಮಾರು ನಾಲ್ಕು ವರ್ಷಗಳ ನಂತರ ಮನೆಗೆ ಮರಳುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಇಸ್ಲಾಮಾಬಾದ್ ಹೈಕೋರ್ಟ್ ನವಾಝ್ ಷರೀಫ್ ಪಾಕಿಸ್ತಾನಕ್ಕೆ ಮರಳಲು ದಾರಿ ಮಾಡಿಕೊಟ್ಟಿತ್ತು. ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಪ್ರಧಾನಿಗೆ ರಕ್ಷಣಾತ್ಮಕ ಜಾಮೀನು ನೀಡಿತ್ತು. ಪ್ರತ್ಯೇಕ ಪ್ರಕರಣದಲ್ಲಿ ಅವರ ವಿರುದ್ಧದ ಬಂಧನ ವಾರಂಟ್ ಅನ್ನು ಮತ್ತೊಂದು ನ್ಯಾಯಾಲಯ ಅಮಾನತುಗೊಳಿಸಿತ್ತು.

- Advertisement -

ಪಾಕಿಸ್ತಾನಕ್ಕೆ ಮಾಜಿ ಪ್ರಧಾನಿ ನವಾಝ್ ಷರೀಫ್ ವಾಪಸಾತಿಗೆ ವಿರೋಧವೂ ತೀವ್ರಗೊಂಡಿದೆ. ಎರಡು ಪ್ರಮುಖ ವಿರೋಧ ಪಕ್ಷಗಳು ಅವರ ಆಗಮನದ ವಿಶೇಷ ವ್ಯವಸ್ಥೆಗಳ ಬಗ್ಗೆ ಕಿಡಿ ಕಾರಿವೆ. ಒಬ್ಬ ವ್ಯಕ್ತಿಯ ಮರಳುವಿಕೆಯಿಂದಾಗಿ ಸಂವಿಧಾನ, ಚುನಾವಣೆಗಳು ಮತ್ತು ಪ್ರಜಾಪ್ರಭುತ್ವವು ಸ್ಥಗಿತಗೊಂಡಿದೆ ಎಂದು ಹೇಳಿವೆ.

Join Whatsapp