ಗುಪ್ತಚರ ಇಲಾಖೆಯ ಸಲಹೆ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಗೆ ‘ಝಡ್ ಪ್ಲಸ್ ವಿಐಪಿ ಭದ್ರತೆ’

Prasthutha|

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗೆ ಕೇಂದ್ರ ಸರ್ಕಾರ ‘ಝಡ್‌ ಪ್ಲಸ್‌’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿಕೊಟ್ಟಿದೆ.

- Advertisement -

ಇನ್ನುಮುಂದೆ ಕೋವಿಂದ್‌ ಪ್ರಯಾಣಿಸುವ ವೇಳೆ ಶಸ್ತ್ರ ಸಜ್ಜಿತ ಬೆಂಗಾವಲು ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಭದ್ರತೆ ನೀಡಲಿದೆ.

ಕೇಂದ್ರೀಯ ಗುಪ್ತಚರ ಇಲಾಖೆ ಸಲಹೆಯ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಝಡ್‌ ಪ್ಲಸ್‌ ಶ್ರೇಣಿಯ ಭದ್ರತೆಗೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್‌ 5ರಿಂದಲೇ ಯೋಧರು ಕೋವಿಂದ್ ಅವರ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಕೇಂದ್ರ ದೆಹಲಿಯ ಜನಪಥ್‌ ರಸ್ತೆಯಲ್ಲಿರುವ ಕೋವಿಂದ್‌ ಅವರ ನಿವಾಸಕ್ಕೂ ಭದ್ರತೆ ಒದಗಿಸಲಾಗುತ್ತದೆ.

Join Whatsapp